` ಬಿಗ್‍ಬಾಸ್ ಕಿಕ್ಕಿಂಗ್ ಸ್ಟಾರ್ ಸಂಯುಕ್ತಾ ಹೆಗ್ಡೆ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
samyuktha hits sameer acharya
Samyuktha Hits Sameer Acharya In Big Boss House

ಸಂಯುಕ್ತಾ ಹೆಗ್ಡೆಗೂ, ಕಿರಿಕ್ಕಿಗೂ ಅದೇನೋ ನಂಟು. ಅವಿನಾಭಾವ ಸಂಬಂಧ. ಮೊದಲ ಚಿತ್ರದ ಹೆಸರೇ ಕಿರಿಕ್ ಪಾರ್ಟಿ ಎಂದು ಇದ್ದಿದ್ದಕ್ಕೋ ಏನೋ.. ಸಂಯುಕ್ತಾ ಹೆಗ್ಡೆ ಮುಟ್ಟಿದ್ದೆಲ್ಲ ವಿವಾದವಾಗುತ್ತೆ. ಆದರೆ, ಈ ಬಾರಿ ಮುಟ್ಟಿದ್ದಕ್ಕಲ್ಲ, ಬಾರಿಸಿದ್ದಕ್ಕೆ ವಿವಾದವಾಗಿದ್ದಾರೆ.

ಬಿಗ್‍ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದ ಸಂಯುಕ್ತಾ ಹೆಗ್ಡೆ, ಸಮೀರಾಚಾರ್ಯ ಅವರನ್ನು ಹೊಡೆದೇಬಿಟ್ಟಿದ್ದಾರೆ. ಗೇಮ್‍ವೊಂದರ ವೇಳೆ ತನ್ನನ್ನು ಸಮೀರಾಚಾರ್ಯ ಮುಟ್ಟಿದರು ಅನ್ಣೋದು ಸಂಯಕ್ತಾ ಆಕ್ರೋಶಕ್ಕೆ ಕಾರಣ. ನಾನು ಸಂಯುಕ್ತಾರನ್ನು ಮುಟ್ಟಿಲ್ಲ ಅನ್ನೋದು ಸಮೀರಾಚಾರ್ಯ ವಾದ. ಈಗ ಹೊಡೆದು ಹೊರಬಿದ್ದಿರುವ ಸಂಯುಕ್ತಾ ಹೆಗ್ಡೆ ಇನ್ನೂ ಹೊರಗೆ ಕಾಣಿಸಿಕೊಂಡಿಲ್ಲ. 

ಬಿಗ್‍ಬಾಸ್ ಮನೆಯಲ್ಲಿ ಈ ರೀತಿ ಆಗ್ತಾ ಇರೋದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಹುಚ್ಚ ವೆಂಕಟ್ ಇದೇ ರೀತಿ ರವಿ ಮುರೂರ್ ಮೇಲೆ ಹಲ್ಲೆ ನಡೆಸಿದ್ದರು. ಈ ಬಾರಿ ಸಂಯುಕ್ತಾ ಹೆಗಡೆ ಸರದಿ. 

 

Padarasa Movie Gallery

Kumari 21 Movie Gallery