ಇಂಡಿಯನ್ ಸಿನಿಮಾಗಳಲ್ಲಿ ಆ್ಯಕ್ಷನ್ ವಿಚಾರಕ್ಕೆ ಬಂದರೆ, ತೆರೆ ಮೇಲೆ ಎನರ್ಜೆಟಿಕ್ ಆಗಿ ಕಾಣಿಸಿಕೊಳ್ಳೋದ್ರಲ್ಲಿ ಅಕ್ಷಯ್ ಕುಮಾರ್ ನಂಬರ್ ಒನ್ ಎಂದರೆ ತಪ್ಪಾಗಲಿಕ್ಕಿಲ್ಲ. ಅಕ್ಷಯ್ ಕುಮಾರ್, ಕರಾಟೆ, ಮಾರ್ಷಲ್ ಆಟ್ರ್ಸ್ ಕಲಿತಿರುವುದು ಕೂಡಾ ಅದಕ್ಕೆ ಕಾರಣ. ಹೀಗಾಗಿಯೇ ಅಕ್ಷಯ್ ಕುಮಾರ್ ಆಕ್ಷನ್ ದೃಶ್ಯಗಳಲ್ಲಿ ಸಹಜವಾಗಿಯೇ ಒಂದು ಫೋರ್ಸ್ ಇರುತ್ತೆ.
ಕನ್ನಡದಲ್ಲಿ ಅಂಥಾದ್ದೊಂದು ಫೋರ್ಸ್ ಇರೋದು ಪುನೀತ್ ರಾಜ್‍ಕುಮಾರ್ ಅವರಲ್ಲಿ. ಈ ಮಾತು ಹೇಳಿರೋದು ಶಿವರಾಜ್ ಕುಮಾರ್. ನನ್ನ ತಮ್ಮ ಎಂದು ಹೇಳಿಕೊಳ್ಳೋದಿಲ್ಲ. ಅಪ್ಪುಗೆ ಅಂಥಾ ಟ್ಯಾಲೆಂಟ್ ಇದೆ. ಅದ್ಭುತವಾಗಿ ಆಕ್ಷನ್ ಮಾಡ್ತಾರೆ ಎಂದು ಹೊಗಳಿದ್ದಾರೆ ಶಿವರಾಜ್ ಕುಮಾರ್.
ಇತ್ತ ಅಪ್ಪುಗೆ ಶಿವಣ್ಣ, ಶ್ರೀಮುರಳಿ ಜೋಡಿಯ ಮಫ್ತಿ ಚಿತ್ರ ಇಷ್ಟವಾಗಿದೆ. ಶಿವರಾಜ್ ಕುಮಾರ್, ಮುರಳಿ ಅಭಿನಯ, ನರ್ತನ್ ನಿರ್ದೇಶನ, ಸಂಗೀತ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ ಪುನೀತ್. ಇದೆಲ್ಲವನ್ನೂ ಅವರು ಹೇಳಿಕೊಂಡಿರೋದು ಒಟ್ಟಿಗೇ ಫೇಸ್‍ಬುಕ್ ಲೈವ್‍ಗೆ ಬಂದಿದ್ದ ವೇಳೆ.