ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಂಜನೀಪುತ್ರ ಮಧ್ಯರಾತ್ರಿಯೇ ರಿಲೀಸ್ ಆಗ್ತಿದೆ. ನೀವು ಒಂದ್ಸಲ ಶೋ ಟೈಮಿಂಗ್ಸ್ ನೋಡಬೇಕು. ಶಾಕ್ ಆಗಿಬಿಡ್ತೀರಿ. ಬೆಂಗಳೂರು, ಬಳ್ಳಾರಿ, ಹೊಸಪೇಟೆ.. ಹೀಗೆ ರಾಜ್ಯದ ಎಲ್ಲ ಕಡೆಗಳಲ್ಲೂ ಅಂಜನೀಪುತ್ರ ಮಧ್ಯರಾತ್ರಿಯೇ ದರ್ಶನ ಕೊಡಲಿದ್ದಾನೆ.
ಬೆಳಗಾವಿ, ಶಿವಮೊಗ್ಗ, ದಾವಣಗೆರೆಯ ಥಿಯೇಟರುಗಳಲ್ಲಿ ಅಂಜನೀಪುತ್ರನ ಮೊದಲ ಶೋ, ಮಧ್ಯರಾತ್ರಿ 12 ಗಂಟೆಗೆ ಫಿಕ್ಸ್ ಆಗಿದೆ. ಬೆಂಗಳೂರಿನ 10ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಮುಂಜಾನೆ 5 ಗಂಟೆಗೇ ಮೊದಲ ಶೋ ಶುರುವಾಗಲಿದೆ.
ಚಿತ್ರ ಮೇಯ್ನ್ ಥಿಯೇಟರ್ ತ್ರಿವೇಣಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರ 78 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗುತ್ತಿದೆ.