ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನೀಪುತ್ರ ಇದೇ ವಾರ ರಿಲೀಸಾಗುತ್ತಿದೆ. ಮುಂದಿನ ಗುರುವಾರ ಮಧ್ಯರಾತ್ರಿಯೇ ಹಲವು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಆದರೆ, ಚಿತ್ರದ ಬಗ್ಗೆ ಅತಿ ದೊಡ್ಡ ನಿರೀಕ್ಷೆ ಯಾವುದು ಗೊತ್ತಾ..? ಅಂಜನೀಪುತ್ರ, ರಾಜಕುಮಾರ ಚಿತ್ರದ ನಂತರ ಬರುತ್ತಿರುವ ಮೊದಲ ಪುನೀತ್ ಸಿನಿಮಾ. ನಿರೀಕ್ಷೆಯ ಭಾರ ಸಹಜವಾಗಿಯೇ ಹೆಚ್ಚಾಗಿದೆ.
ಆದರೆ, ಅದರ ಭಾರ ನಾನು ಹೊರುವುದಿಲ್ಲ. ರಾಜಕುಮಾರ ದೊಡ್ಡ ಸಕ್ಸಸ್ ನಿಜ. ಆದರೆ, ಸಿನಿಮಾದಿಂದ ಸಿನಿಮಾಗೆ ನಾವು ಬದಲಾಗಲೇಬೇಕು. ಇಲ್ಲಿ ನಾನು ಒಂದು ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಪಾತ್ರವಷ್ಟೇ ಆಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ ಪುನೀತ್.
ಅಂಜನೀಪುತ್ರದ ನಿರ್ದೇಶಕ ಹರ್ಷ. ಪುನೀತ್ & ಹರ್ಷ ಸುಮಾರು 18 ವರ್ಷಗಳಿಂದ ಸ್ನೇಹಿತರು. ಆ ಸ್ನೇಹ ಸಿನಿಮಾ ನಿರ್ಮಾಣದಲ್ಲೂ ಕೆಲಸ ಮಾಡಿದೆ.