ಡಿ.31ರ ರಾತ್ರಿ ಬೆಂಗಳೂರಿನಲ್ಲಿ ಆಯೋಜಿಸಿರುವ ಸನ್ನಿ ನೈಟ್ಸ್ ಕಾರ್ಯಕ್ರಮ, ನಮ್ಮ ಸಂಸ್ಕøತಿಗೆ ತಕ್ಕುದಲ್ಲ ಎಂದು ಸರ್ಕಾರ ನಿಷೇಧಿಸಿದೆ. ಪೊಲೀಸ್ ಇಲಾಖೆ ಅನುಮತಿ ಕೊಟ್ಟಿಲ್ಲ. ಸ್ವತಃ ಗೃಹ ಸಚಿವರೇ ಕಾರ್ಯಕ್ರಮ ರದ್ದು ಮಾಡಲು ಸೂಚಿಸಿದ್ದಾರೆ.
ಆದರೆ, ಕಾರ್ಯಕ್ರಮದ ಆಯೋಜಕರು ಟಿಕೆಟ್‍ಗಳನ್ನು ಮಾರುತ್ತಲೇ ಇದ್ದಾರೆ. ನಾಗವಾರ ರಿಂಗ್ ರಸ್ತೆಯಲ್ಲಿರುವ ವೈಟ್ ಆರ್ಕಿಡ್‍ನಲ್ಲಿ ಟೈಮ್ ಕ್ರಿಯೇಷನ್ಸ್ ಈ ಕಾರ್ಯಕ್ರಮ ಆಯೋಜಸಿದೆ. ಪೊಲೀಸರ ಅನುಮತಿ ಇಲ್ಲದಿದ್ದರೂ, 3ರಿಂದ 8 ಸಾವಿರ ರೂ. ನಿಗದಿಪಡಿಸಲಾಗಿದೆ. ಬಿಯರ್, ದೇಸಿ ಮದ್ಯ, ಅನಿಯಮಿತ ಊಟದ ಆಫರ್‍ನ್ನೂ ನೀಡಲಾಗಿದೆ.
ಹೇಗೆ..? ಮತ್ತೇನಾದರೂ ಅನುಮತಿ ಕೊಟ್ಟಿದ್ದಾರಾ ಎಂದು ನೋಡಿದರೆ, ಹಾಗೇನಿಲ್ಲ. ಇದುವರೆಗೆ ಯಾರೂ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿಯೇ ಇಲ್ಲ. ಇನ್ನು ಮೇಲೆ ಅನುಮತಿಗಾಗಿ ಅರ್ಜಿ ಹಾಕಿದರೂ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಬೆಂಗಳೂರು ಕಮಿಷನರ್ ಸುನಿಲ್ ಕುಮಾರ್.
ಸನ್ನಿ ಲಿಯೋನ್ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ, ಟಿಕೆಟ್ ಮಾರಾಟವಾಗುತ್ತಿರುವುದು ಹೇಗೆ..? ಅದೇ ಸನ್ನಿ ಸಸ್ಪೆನ್ಸ್.