ಅಂಜನೀಪುತ್ರ ರಿಲೀಸ್‍ಗೆ ಸಿದ್ಧವಾಗಿರುವಾಗುತ್ತಿದೆ. ರಾಜಕುಮಾರ ಚಿತ್ರದ ಅದ್ಭುತ ಯಶಸ್ಸಿನ ಬರುತ್ತಿರುವ ಅಂಜನೀಪುತ್ರದಲ್ಲಿ ಕಿರಿಕ್ ಯಶಸ್ಸಿನ ರಶ್ಮಿಕಾ ಮಂದಣ್ಣ ನಾಯಕಿ. ಕಿರಿಕ್ ಪಾರ್ಟಿ ನಂತರ ತೆರೆಗೆ ಬರುತ್ತಿರುವ ರಶ್ಮಿಕಾರ ಮೊದಲ ಚಿತ್ರ ಅಂಜನೀಪುತ್ರ. ಈ ಚಿತ್ರದಲ್ಲಿ ಪುನೀತ್ ಜೊತೆಗಿನ ಹಾಗೂ ಚಿತ್ರತಂಡದ ಜೊತೆಗಿನ ಅನುಭವಗಳನ್ನು ರಶ್ಮಿಕಾ ಹೇಳಿಕೊಂಡಿದ್ದಾರೆ.
ಪುನೀತ್ ಜೊತೆ ನಟಿಸುವಾಗ, ಸಣ್ಣದೊಂದು ಆತಂಕವಿದ್ದದ್ದು ಹೌದು. ಆದರೆ, ಅವರ ಜೊತೆ ನಟಿಸುವಾಗ, ಅವರೊಬ್ಬ ದೊಡ್ಡ ಸ್ಟಾರ್ ಎಂದು ನನಗೆ ಅನ್ನಿಸಲೇ ಇಲ್ಲ. ಅವರು ಅಷ್ಟು ಸಹಜವಾಗಿ ಸಿಂಪಲ್ ಆಗಿದ್ದರು. ಸ್ಟಾರ್ ನಟರೆಲ್ಲ ಹೀಗೆ ಇರುತ್ತಾರೇನೋ.. ಎತ್ತರಕ್ಕೆ ಬೆಳೆದವರು ಹೇಗೆ ಇರಬೇಕು ಅನ್ನೋದನ್ನು ಪುನೀತ್ ಅವರಿಂದ ಕಲಿಯಬೇಕು ಎಂದು ಹೊಗಳಿದ್ದಾರೆ ರಶ್ಮಿಕಾ.
ಶೂಟಿಂಗ್ ವೇಳೆ ಚಿತ್ರತಂಡದಲ್ಲಿದ್ದ ದೊಡ್ಡ ದೊಡ್ಡ ಕಲಾವಿದರೆಲ್ಲ ನನ್ನನ್ನು ಹೊಸ ನಟಿ ಎಂಬಂತೆ ನೋಡಲೇ ಇಲ್ಲ. ಅದು ನನಗೆ ಖುಷಿ ಕೊಟ್ಟಿತು ಎಂದಿದ್ದಾರೆ ರಶ್ಮಿಕಾ. ನಿರ್ದೇಶಕ ಹರ್ಷ ಅವರಂತೂ ರಶ್ಮಿಕಾ ಅವರನ್ನು ಮಗುವಿನ ಹಾಗೆ ಟ್ರೀಟ್ ಮಾಡಿದರಂತೆ. ಆದರೆ, ಶೂಟಿಂಗ್ ವೇಳೆ ತಾವು ಅಂದುಕೊಂಡಿದ್ದನ್ನು ಎಷ್ಟೇ ಕಷ್ಟವಾದರೂ ಪಡೆದೇ ತೀರುತ್ತಿದ್ದರು ಎಂದಿದ್ದಾರೆ ರಶ್ಮಿಕಾ.