ಚಮಕ್, ಇದೇ ತಿಂಗಳು ಅಂದರೆ ಡಿಸೆಂಬರ್ 29ರಂದು ಬಿಡುಗಡೆಯಾಗ್ತಿದೆ. ಈ ಡಿಸೆಂಬರ್ ರಶ್ಮಿಕಾಗೆ ಲಕ್ಕಿ. ಕಳೆದ ವರ್ಷ ಡಿಸೆಂಬರ್ 30ಕ್ಕೆ ಕಿರಿಕ್ ಪಾರ್ಟಿ ರಿಲೀಸ್ ಆಗಿತ್ತು. ಈಗ, ಒಂದು ದಿನ ಮುಂಚಿತವಾಗಿ ಚಮಕ್ ರಿಲೀಸ್ ಆಗ್ತಿದೆ.
ಅಷ್ಟೇ ಅಲ್ಲ, ಗಣೇಶ್‍ಗೂ ಡಿಸೆಂಬರ್ ಲಕ್ಕಿ ತಿಂಗಳು. ಮುಂಗಾರು ಮಳೆ ರಿಲೀಸ್ ಆಗಿದ್ದುದೇ ಡಿಸೆಂಬರ್‍ನಲ್ಲಿ. ಹೀಗಾಗಿ ಎರಡು ಲಕ್ಕುಗಳ ಜೊತೆ ತುಂಟ ನಿರ್ದೇಶಕ ಎಂದೇ ಫೇಮಸ್ ಆಗಿರೋ ಸುನಿ ನಿರ್ದೇಶನದ ಚಮಕ್ ರಿಲೀಸ್ ಆಗ್ತಿದೆ.