` ಶಂಕರ್‍ನಾಗ್ ಅಭಿಮಾನಿಗಳಿಂದ ಡಾ.ರಾಜ್ 3ಡಿ ಕೇಕ್  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shankar nag fans inaugurate 3d cake
Shankar Nag, Rajkumar Image

ಶಂಕರ್‍ನಾಗ್, ನಮ್ಮನ್ನಗಲಿ 42 ವರ್ಷಗಳಾಗಿವೆ. ಡಾ. ರಾಜ್ ಕೂಡಾ ನಮ್ಮನ್ನಗಲಿದ್ದಾರೆ. ಇಬ್ಬರೂ ಕನ್ನಡಿಗರ ಹೃದಯದಲ್ಲಿ ಜೀವಂತವಾಗಿದ್ದಾರೆ. ವಿಶೇಷ ಅದಲ್ಲ, ಈಗ ಶಂಕರ್‍ನಾಗ್ ಅಭಿಮಾನಿಗಳ ಸಂಘದ ವತಿಯಿಂದ ಡಾ.ರಾಜ್‍ಕುಮಾರ್ 3ಡಿ ಕೇಕ್ ಪ್ರದರ್ಶನಕ್ಕೆ ಯೋಜನೆ ರೂಪಿಸಲಾಗಿದೆ.

ಶಂಕರ್‍ನಾಗ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಈ ವರ್ಷ, ರಾಜ್ ಅವರಷ್ಟೇ ಎತ್ತರ ಮತ್ತು ಗಾತ್ರದ 3ಡಿ ಕೇಕ್ ಪ್ರದರ್ಶನ ಮಾಡಲು ಯೋಜನೆ ರೂಪಿಸಿದೆ. ಕಳೆದ ವರ್ಷ ಶಂಕರ್‍ನಾಗ್ 3ಡಿ ಕೇಕ್ ಪ್ರದರ್ಶನ ಮಾಡಲಾಗಿತ್ತು. ಈ ವರ್ಷ ಅಣ್ಣಾವ್ರ ಕೇಕ್ ಸಿದ್ಧಗೊಂಡಿದೆ. 

ಕೇಕ್ ಪ್ರದರ್ಶನದಲ್ಲಿ ಪ್ರದರ್ಶನ ಮಾಡುವ ಮುನ್ನ ಡಿ.17ರಂದು ಡಾ.ರಾಜ್ ಸ್ಮಾರಕದಲ್ಲಿ ಮೊದಲ ಬಾರಿಗೆ ರಾಜ್ 3ಡಿ ಕೇಕ್ ಪ್ರಧರ್ಶನ ನಡೆಯಲಿದೆ. 3ಡಿ ಕೇಕ್ ಎಂದರೆ ಏನು..? ಹೇಗಿರುತ್ತೆ..? ಇಂತಹ ಹತ್ತು ಹಲವು ಕುತೂಹಲಗಳಿಗೆ ಡಿ.17ರಂದೇ ಉತ್ತರ ಸಿಗಲಿದೆ. ನಿರೀಕ್ಷಿಸಿ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery