` ಗಾಂಧಿನಗರದ ರಸ್ತೆಗೆ ಪಾರ್ವತಮ್ಮನವರ ಹೆಸರು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bbmp, vajreshwari raste
Gandhinagar Road To Be Named Vajreshwari Road

ಗಾಂಧಿನಗರ ಎಂದರೆ ಚಿತ್ರರಂಗ. ಚಿತ್ರರಂಗ ಎಂದರೆ ಗಾಂಧಿನಗರ. ಚಿತ್ರರಂಗಕ್ಕೆ ಪಾರ್ವತಮ್ಮ ರಾಜ್‍ಕುಮಾರ್ ಅವರ ಕೊಡುಗೆಯನ್ನಂತೂ ಮರೆಯುವಂತೆಯೇ ಇಲ್ಲ. ಪಾರ್ವತಮ್ಮನವರ ಕನಸಿನ ಕೂಸು ವಜ್ರೇಶ್ವರಿ ಕಂಬೈನ್ಸ್. ಈಗ ಗಾಂಧಿನಗರದಲ್ಲಿ ವಜ್ರೇಶ್ವರಿ ಕಂಬೈನ್ಸ್ ಇರುವ ರಸ್ತೆಗೆ ವಜ್ರೇಶ್ವರಿ ರಸ್ತೆ ಎಂದೇ ನಾಮಕರಣ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಗಾಂಧಿನಗರದ 6ನೇ ಕ್ರಾಸ್ ರಸ್ತೆಯನ್ನು ಚಿತ್ರರಂಗದವರು ಹೆಚ್ಚೂ ಕಡಿಮೆ ವಜ್ರೇಶ್ವರಿ ರಸ್ತೆ ಎಂದೇ ಕರೆಯುತ್ತಿದ್ದರು. ಇನ್ನು ಮುಂದೆ ಅಧಿಕೃತವಾಗಿಯೇ ಆ ರಸ್ತೆಗೆ ವಜ್ರೇಶ್ವರಿ ರಸ್ತೆ ಎಂದು ನಾಮಕರಣವಾಗಲಿದೆ. ಮೊಹಮ್ಮದ್ ರಿಜ್ವಾನ್ ನವಾಬ್ ಹಾಗೂ ಎಂ.ಶಿವರಾಜು ಮುಂದಿಟ್ಟ ಪ್ರಸ್ತಾವನೆಯನ್ನು ಬಿಬಿಎಂಪಿ ಸರ್ವಾನುಮತದಿಂದ ಅಂಗೀಕರಿಸಿದೆ.

ಮೇಯರ್ ಕೂಡಾ ಸಹಿ ಮಾಡಿದ್ದಾರೆ. ಅಂದಹಾಗೆ ಇದೇ ರಸ್ತೆಯಲ್ಲಿ ರಾಜ್‍ಕುಮಾರ್ ಇಂಟರ್‍ನ್ಯಾಷನಲ್ ಹೋಟೆಲ್ ಹಾಗೂ ಚಿತ್ರರಂಗದ ಹಲವು ಪ್ರೊಡಕ್ಷನ್ ಹೌಸ್‍ಗಳ ಕಚೇರಿಗಳಿವೆ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery