ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಈ ಬಾರಿ ಧ್ರುವ ಸರ್ಜಾ 2 ವರ್ಷ ಕಾಯುವುದಿಲ್ಲ ಎನ್ನುವ ಭರವಸೆ ಇದೆ. ಏಕೆಂದರೆ, ಚಿತ್ರದ ನಿರ್ದೇಶಕ ನಂದಕಿಶೋರ್. ಡಿಸೆಂಬರ್ 14ಕ್ಕೆ ಪೊಗರು ಚಿತ್ರದ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರೀಕರಣ ಶುರುವಾಗುವುದು ಮುಂದಿನ ತಿಂಗಳು. ಅಂದಹಾಗೆ ಚಿತ್ರಕ್ಕೆ ಕ್ಲಾಪ್ ಮಾಡಲಿರುವುದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.
ಅದ್ದೂರಿಯಾಗಿ ತೆರೆಗೆ ಬಂದ ಬಹಾದ್ದೂರ್‍ನ `ಪೊಗರು' ಇಳಿಸೋಕೆ ಇಬ್ಬರು ಬ್ಯೂಟಿ ಕ್ವೀನ್‍ಗಳು ಭರ್ಜರಿಯಾಗಿ ಎಂಟ್ರಿ ಕೊಡ್ತಿರೋದು ವಿಶೇಷ. ಒಬ್ಬರು ರಶ್ಮಿಕಾ ಮಂದಣ್ಣ. ಮತ್ತೊಬ್ಬರು ಶಾನ್ವಿ ಶ್ರೀವಾಸ್ತವ್. ಗಂಗಾಧರ್ ನಿರ್ಮಾಣದ ಚಿತ್ರದಲ್ಲಿ ಜಗಪತಿ ಬಾಬು, ಚಿಕ್ಕಣ್ಣ, ಸಾಧು ಕೋಕಿಲ, ಪ್ರಕಾಶ್ ರೈ ಮೊದಲಾದ ದೊಡ್ಡ ಕಲಾವಿದರ ದಂಡೇ ಇದೆ.