` ಚಮಕ್‍ನಲ್ಲಿ ಜಗ್ಗೇಶ್ ಚಮಕ್ಕೂ ಇದೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh's commentary in chamak
Ganesh, Chamak Image

ಸಿಂಪಲ್ ಸುನಿ ಚಮಕ್ ಸುನಿ ಆಗ್ತಾರಾ..? ಅಂಥಾದ್ದೊಂದು ನಿರೀಕ್ಷೆ ಹುಟ್ಟಿಸಿದೆ ಈ ಸಿನಿಮಾ. ಚಿತ್ರಕ್ಕೆ ಯು ಸರ್ಟಿಫಿಕೇಟು ಸಿಕ್ಕಿರುವುದನ್ನೂ ಫುಲ್ ಜೋಶ್‍ನಿಂದ ಹೇಳಿಕೊಂಡಿದೆ ಚಮಕ್ ಟೀಮು. ಸುನಿ ಸಹವಾಸವೋ ಏನೋ.. ಚಿತ್ರದಲ್ಲಿ ಭಾಗಿಯಾಗಿದ್ದವರೆಲ್ಲ ಇಷ್ಟಿಷ್ಟೇ ತುಂಟರಾಗುತ್ತಿದ್ದಾರೆ.

ಈತ ತುಂಟಾಟದ ಮಹಾರಾಜ ಜಗ್ಗೇಶ್ ಕೂಡಾ ಚಮಕ್ ಟೀಂನಲ್ಲಿದ್ದಾರಂತೆ. ಚಿತ್ರದಲ್ಲಿ ಜಗ್ಗೇಶ್ ಅವರ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಕನ್ನಡಿಗರಿಗೆ ರಸಗವಳ ಸಾಕಿದೆ ಎಂದು ಹೇಳಿರೋ ಜಗ್ಗೇಶ್, ಅಭಿಮಾನಿಗಳ ಕಿವಿಗೆ ರಸಗವಳದ ಸುನಾಮಿಯ ಸೂಚನೆ ಕೊಟ್ಟಿದ್ದಾರೆ.

ಚಂದ್ರಶೇಖರ್ ನಿರ್ಮಾಣದ ಸಿನಿಮಾ, ಚಿತ್ರ ನರ್ತಕಿ ಥಿಯೇಟರ್‍ನಲ್ಲಿ ರಿಲೀಸಾಗುತ್ತಿದೆ. ಎಲ್ಲ ಟೈಮಲ್ಲೂ ಕರೆಂಟು ಬರಲಿ ಅಂತೇನಿಲ್ಲ, ಕರೆಂಟು ಹೋಗಲಿ ಎಂದು ಕೂಡಾ ಬೇಡಿಕೊಳ್ಳಬೇಕಾಗುತ್ತೆ ಎಂದು ಟ್ವೀಟ್ ಮಾಡಿರೋ ಸುನಿ, ಅದೇನೇನು ಚಮಕ್ ಇಟ್ಟಿದ್ದಾರೋ.. ಏನೋ.. 

#

Edakallu GuddadaMele Movie Gallery

Rightbanner02_backasura_inside

Rajaratha Movie Gallery