` ನಾನು ಪಾರ್ವತಿ ಕೃತಿ ಬಿಡುಗಡೆ ಸಂಭ್ರಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
naanu parvathi book launch
Naanu Parvathi Book Launch Image

ಪಾರ್ವತಮ್ಮ ರಾಜ್‍ಕುಮಾರ್ ಜೀವನ, ಸಾಧನೆಗಳ ಕುರಿತ ಕೃತಿ `ನಾನು ಪಾರ್ವತಿ'. ಜೋಗಿ ಅವರು ಬರೆದಿರುವ ಚಿತ್ರಲೋಕ ಡಾಟ್ ಕಾಮ್ ಅರ್ಪಿಸಿರುವ ಕೃತಿಯ ಬಿಡುಗಡೆ ಸಮಾರಂಭಕ್ಕೆ ರಾಘವೇಂದ್ರ ರಾಜ್‍ಕುಮಾರ್, ಸುದೀಪ್, ಜಯಮಾಲಾ, ಸುವರ್ಣ ನ್ಯೂಸ್ & ಕನ್ನಡಪ್ರಭ ಸಂಪಾದಕ ರವಿ ಹೆಗ್ಡೆ, ಜೋಗಿ (ಗಿರೀಶ್ ರಾವ್ ಹತ್ವಾರ್), ಫಿಲಂಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು, ಚಿತ್ರಲೋಕ ಸಂಪಾದಕ ವೀರೇಶ್, ಹಿರಿಯ ನಿರ್ದೇಶಕ ಭಗವಾನ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಸಾಕ್ಷಿಯಾದರು.

ರಾಘವೇಂದ್ರ ರಾಜ್‍ಕುಮಾರ್ ತಾಯಿಯ ಸಾಮಾಜಿಕ ಕಳಕಳಿಯನ್ನು ಸ್ಮರಿಸಿದರು. ನಾವು ಮೂರೂ ಜನ ಒಟ್ಟಿಗೇ ಒಂದೇ ಚಿತ್ರದಲ್ಲಿ ನಟಿಸುವ ಕನಸು ಇನ್ನೂ ಈಡೇರಿಲ್ಲ ಎಂದು ಹೇಳಿಕೊಂಡರು. ಮಿಸ್ ಯೂ ಅಮ್ಮ, ಬೇಗ ಹಿಂದಿರುಗಿ ಬಂದುಬಿಡಮ್ಮ, ನಾನು ಇನ್ನೇನೂ ಕೇಳುವುದಿಲ್ಲ ಎಂದು ಭಾವುಕರಾದಾಗ, ಸಮಾರಂಭದಲ್ಲಿದ್ದವರೂ ಭಾವುಕರಾದರು.

ನಟ ಸುದೀಪ್ `ಮೊದಲಿನಿಂದಲೂ ಅವರಿಗೂ (ಡಾ.ರಾಜ್ ಕುಟುಂಬ) ನಮಗೂ ಆಗಿಬರುವುದಿಲ್ಲ ಎಂದು ಬರೆದುಕೊಂಡು ಬರುತ್ತಿದ್ದರು. ಅದನ್ನು ನೋಡಿ ನೋಡಿ ನಮಗೂ ಹಾಗೆಯೇ ಅನ್ನಿಸೋಕೆ ಶುರುವಾಗಿಬಿಟ್ಟಿತ್ತು. ಚಿತ್ರರಂಗಕ್ಕೆ ಖಾಲಿ ಕಂಪ್ಯೂಟರ್‍ನಂತೆ ಬಂದಿದ್ದ ನಮಗೆ, ಅಲ್ಲಿದ್ದವರು ಈ ಮನೆಯ ಬಗ್ಗೆ ಏನೇನೋ ಹೇಳಿ ತಲೆಗೆ ತುಂಬಿದ್ದರು. ಆಗೆಲ್ಲ ನಮಗೆ ಶಿವಣ್ಣ ಹೆಂಗೆಂಗೋ ಕಾಣಿಸುತ್ತಿದ್ದರು. ರಾಘಣ್ಣ ಕಪ್ಪಗೆ ಕಾಣಿಸುತ್ತಿದ್ದರು.ನಾವು ಅವರಿಗೆ ಹೇಗೆ ಕಾಣಿಸುತ್ತಿದ್ದೆವೋ ಗೊತ್ತಿಲ್ಲ. ಆದರೆ, ಶಿವಣ್ಣ ಅವರ ಸಾಧನೆಯ ಮುಂದೆ ನಾನು ತುಂಬಾ ಚಿಕ್ಕವನು. ಈ ಕಾರ್ಯಕ್ರಮಕ್ಕೆ ಬಂದ ಮೇಲೆ ನನಗೆ ಎಲ್ಲ ತಿಳಿಯುತ್ತಿದೆ. ನಾನು ಪಾರ್ವತಿ ಪುಸ್ತಕದ ತೂಕ ಅರ್ಥವಾಗಿದೆ ಎಂದು ಹೇಳಿಕೊಂಡರು. 

ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು, ಡಾ.ರಾಜ್ ಅವರೊಂದಿಗಿನ ಹೋರಾಟದ ದಿನಗಳ ಮೆಲುಕು ಹಾಕಿದರು. ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಓದುಗರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.

Related Articles :-

Shivanna, Sudeep For Naanu Parvati Book Release

ಚಿತ್ರಲೋಕದಿಂದ `ನಾನು ಪಾರ್ವತಿ' ಇಂದು ಬಿಡುಗಡೆ

Chitraloka's New Book Naanu Parvathi To Release Tomorrow

Ayushmanbhava Movie Gallery

Ellidhe Illitanaka Movie Gallery