ಹಂಸಲೇಖ, ಕನ್ನಡ ಚಿತ್ರ ಸಂಗೀತ ಲೋಕದ ನಾದಬ್ರಹ್ಮ. ದಶಕಗಳ ಕಾಲ ಕನ್ನಡ ಸಂಗೀತ ಲೋಕದ ಸಾಮ್ರಾಟನಾಗಿ ಮೆರೆದವರು. ಇಂತಹ ಹಂಸಲೇಖ ಅವರಿಗೆ ಒಂದು ಕನಸಿತ್ತು. ದೇಸಿ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ಕನಸದು. ಅದಕ್ಕೆ ಹಂಸಲೇಖ, ಚಿತ್ರ ಸಂಗೀತವನ್ನು ಬಿಟ್ಟು, ಊರೂರು ತಿರುಗಿದ್ದರು. ಹಳ್ಳಿ ಹಳ್ಳಿಗಳಿಂದ ಹುಡುಕಿ 900 ಜನರನ್ನು ಕರೆತಂದಿದ್ದರು.
ಆದರೆ, ಅಲ್ಲಿಂದ ಕಾಲೇಜಿಗೆ ಬರಬೇಕಿದ್ದ ಆ 900 ವಿದ್ಯಾರ್ಥಿಗಳಲ್ಲಿ ಒಬ್ಬರೂ ಬರಲಿಲ್ಲ. ಸಾಂಸ್ಕøತಿಕ ಕ್ಷೇತ್ರದಲ್ಲೂ ಹಣ ಇದೆ ಅನ್ನೋದು ಅವರಿಗೆ ಗೊತ್ತಿಲ್ಲ. ಹೀಗಾಗಿ ಯುನಿವರ್ಸಿಟಿ ಕಟ್ಟುವ ಕನಸು ಹೊತ್ತಿದ್ದ ಹಂಸಲೇಖ, ಈಗ ಅದನ್ನೇ ಜಾನಪದ ಸಂಶೋಧನಾ ಕೇಂದ್ರ ಮಾಡಲು ಹೊರಟಿದ್ದಾರೆ.