` ವಿಷ್ಣು ಅಭಿಮಾನಿಗಳ ಅಭಿಮಾನದ ಕ್ಯಾಲೆಂಡರ್ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
vishnu fans launch vishnu calender
Vishnu Calendar

ಈಕೆ ನನ್ನ ಹೆಂಡತಿ ಎಂದು ಪರಿಚಯಿಸುವುದಕ್ಕೂ, ಇವರು ನನ್ನ ಶ್ರೀಮತಿ ಎಂದು ಪರಿಚಯಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹೆಂಡತಿ ಎಂದಾಗ ಕಾಮದ ವಾಸನೆ ಕಾಣಬಹದು. ಶ್ರೀಮತಿ ಎಂದು ಕರೆದಾಗ, ಅದರಲ್ಲಿ ಪ್ರೀತಿ, ವಿಶ್ವಾಸದ ಸುವಾಸನೆ ಕಾಣಬಹುದು.

ಡಾ. ವಿಷ್ಣುವರ್ಧನ್.ಜೀವನದ ಬಗ್ಗೆ ಇಂತಹ ಹಲವು ನುಡಿಮುತ್ತುಗಳನ್ನು ಹೇಳಿದ್ದರು ವಿಷ್ಣುವರ್ಧನ್. ಅಂತಹ ಮಾತುಗಳನ್ನೆಲ್ಲ ಒಟ್ಟಿಗೇ ಸೇರಿಸಿ, ವಿಷ್ಣು ಕ್ಯಾಲೆಂಡರ್ ಮಾಡಿದ್ದಾರೆ ವಿಷ್ಣುವರ್ಧನ್ ಅಭಿಮಾನಿಗಳು. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ, 2018ಕ್ಕೆ ವಿಷ್ಣು ಕ್ಯಾಲೆಂಡರ್ ಹೊರತಂದಿದ್ದಾರೆ. 

ತೆರೆ ಹಿಂದೆ, ತೆರೆ ಮುಂದೆ ನುಡಿದಂತೆ ನಡೆದ ನಮ್ಮ ವಿಷ್ಣು ಕೋಟಿಗೊಬ್ಬ ಎಂಬ ಕ್ಯಾಲೆಂಡರ್‍ನಲ್ಲಿ 12 ತಿಂಗಳಿಗೂ 12 ನುಡಿಮುತ್ತುಗಳಿವೆ. ಎಲ್ಲವೂ ವಿಷ್ಣು ಹೇಳಿದ್ದ ಮಾತುಗಳೇ ಎನ್ನವುದು ವಿಶೇಷ. ಜೊತೆಗೆ ಪ್ರತಿ ತಿಂಗಳ ಪುಟದಲ್ಲೂ ವಿಷ್ಣು ಅವರ ಅಪರೂಪದ ಫೋಟೋಗಳಿವೆ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery