` ಅಭಿಮಾನಿಗಳೇ ನಮಸ್ಕಾರ.. ಅಂಬರೀಷ್ ಒಲವಿನ ಉಡುಗೊರೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ambi's letter to fans
Ambareesh Image

ಅಂಬರೀಷ್ ಮಾತು ಯಾವತ್ತೂ ಹಾಗೆಯೇ.. ಒರಟು. ಹೃದಯದ ಮಾತು ಬೇರೆ. ಆ ಒರಟುತನವನ್ನು ಬಿಟ್ಟು, ಅಂಬರೀಷ್ ಏನಾದರೂ ನಯವಿನಯದಿಂದ ಮಾತನಾಡಿದರೆ, ಮಾತನಾಡಿಬಿಟ್ಟರೆ... ಅವರನ್ನು ಹತ್ತಿರದಿಂದ ಬಲ್ಲವರು ಏನೋ ಪ್ರಾಬ್ಲಂ ಆಗಿರಬೇಕು ಎಂದುಕೊಳ್ತಾರೆ. ಅಷ್ಟರಮಟ್ಟಿಗೆ ಅಂಬರೀಷ್ ಅವರ ಒರಟುತನದ ಮಂಡ್ಯ ಭಾಷೆಯೂ ಫೇಮಸ್. ಅಂಥ ಅಂಬರೀಷ್, ಅಭಿಮಾನಿಗಳೇ ನಮಸ್ಕಾರ ಎಂದಿದ್ದಾರೆ. ಅಭಿಮಾನಿಗಳಿಗೆ ಪತ್ರವನ್ನೂ ಬರೆದಿದ್ದಾರೆ.

ಇದು `ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಪ್ರಥಮ ಟೀಸರ್. ನಾನೇಕೆ ಈ ಪಾತ್ರವನ್ನು ಒಪ್ಪಿಕೊಂಡೆ ಅನ್ನೋದನ್ನು ಅಂಬರೀಷ್ ಹೇಳ್ತಾ ಹೋಗ್ತಾರೆ. ಅಂಬರೀಷ್ ನಟನಾಗಬೇಕು, ಸ್ಟಾರ್ ಆಗಬೇಕೆಂದು ಚಿತ್ರರಂಗಕ್ಕೆ ಬಂದವರಲ್ಲ. ಪುಟ್ಟಣ್ಣನವರ ಗರಡಿಯಲ್ಲಿ ಅವರ ಶಿಷ್ಯನಾಗಿ, ಬಂದದ್ದನ್ನು ಬಂದಂತೆಯೇ ಸ್ವೀಕರಿಸಿ ರೆಬಲ್‍ಸ್ಟಾರ್ ಆದವರು. ಶಾಸಕರಾಗಿ, ಸಂಸದರಾಗಿ, ಕೇಂದ್ರದಲ್ಲಿ, ರಾಜ್ಯದಲ್ಲಿ ಮಂತ್ರಿಯಾಗಿ.. ರಾಜಕಾರಣದ ದೊಡ್ಡ ಮೆಟ್ಟಿಲುಗಳನ್ನೂ ಹತ್ತಿದವರು ಅಂಬರೀಷ್.

ಇದೆಲ್ಲದರ ಮಧ್ಯೆ ಎರಡು ವರ್ಷದ ಹಿಂದೆ ಅಂಬರೀಷ್ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದರಲ್ಲ.. ಆಗ ಅಂಬರೀಷ್‍ರೊಳಗಿನ ಕಲಾವಿದನ ಚಡಪಡಿಕೆ ಶುರುವಾಯಿತಂತೆ. ನನ್ನ ವಯಸ್ಸಿಗೆ ತಕ್ಕಂತ ಪಾತ್ರಗಳಲ್ಲಿ ನಟಿಸಬೇಕು ಎಂಬ ಚಡಪಡಿಕೆ ತುಡಿಯುತ್ತಿದ್ದಾಗ ಬಂದ ಚಿತ್ರವೇ `ಅಂಬಿ ನಿಂಗೆ ವಯಸ್ಸಾಯ್ತೋ'.

ಇಂಥಾದ್ದೊಂದು ಪಾತ್ರ ಕೊಟ್ಟ ಸುದೀಪ್‍ಗೆ ಥ್ಯಾಂಕ್ಸ್ ಹೇಳುವ ಅಂಬಿ, ಸುದೀಪ್ ನನ್ನ ಮಗನಿದ್ದ ಹಾಗೆ ಎಂದು ಪ್ರೀತಿಯಿಂದ ಹೇಳಿಕೊಳ್ತಾರೆ. ಸಿನಿಮಾ ರೆಡಿಯಾಗುತ್ತಿದೆ. ಬೇಗ ಬರ್ತೇವೆ. ಬಂದು ನೋಡಿ ಹಾರೈಸಿ ಎಂದು ತಮ್ಮ ಜೀವನದಲ್ಲಿಯೇ ಮೊತ್ತ ಮೊದಲ ಬಾರಿಗೆ ಅಭಿಮಾನಿಗಳಿಗೆ ನಮಸ್ಕಾರ ಹೇಳಿ ಕೇಳಿಕೊಂಡಿದ್ದಾರೆ. ಅಫ್‍ಕೋರ್ಸ್.. ಹಿಂಗೇ ಹೇಳಿಬಿಟ್ರೆ ಕನ್‍ಫ್ಯೂಸ್ ಆಗಿಬಿಟ್ಟಾರು ಎಂದು ಕೊನೆಗೆ ತಮ್ಮದೇ ಸ್ಟೈಲ್‍ನಲ್ಲಿ ಅಭಿಮಾನಿಗಳಿಗೊಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. 

#

Edakallu GuddadaMele Movie Gallery

Rightbanner02_backasura_inside

Rajaratha Movie Gallery