ಹಾಡಿದೆ.. ಹಾಡು ಕಟ್ಟಿದೆ.. ಹಾಡಿದರೆ ಕರುಣಿಸೋ ಜನಮನವೇ.. ನೀವೇ ನನ್ನ ಕಾಯಕದ ಸ್ಫೂರ್ತಿ. ಸಂಗೀತವೇ ನನ್ನ ದೇವರು.. ಚಪ್ಪಾಳೆಯೇ ನನ್ನ ಉಸಿರು.. ಅಕ್ಕರೆ, ಅಚ್ಚರಿಗಳನ್ನು ತುಂಬಿಕೊಂಡು, ಸಂಪಿಗೆ ಸರಿಗಮಗಳ ಬಾಗಿನ ಹೊತ್ತುಕೊಂಡು ಇರೋ ಬರುತ್ತಿದ್ದೇನೆ.. ಸರಿಗಮಪ ಕುಟುಂಬಕ್ಕೆ ನಿರಂತರವಾಗಿ.. ಪೂಜ್ಯ ಕನ್ನಡಿಗರೇ.. ನಾನಿಲ್ಲಿ ಗುರುತಿಸುವ ಗುರು ನೀವು.. ಜಯ ಕೊಡುವ ಕಲ್ಪತರು. ಹೀಗೆ ಹೇಳಿಕೊಂಡು ಕಿರುತೆರೆಗೆ ಬರುತ್ತಿದ್ದಾರೆ ಹಂಸಲೇಖ. ಸರಿಗಮಪ ಸೀಸನ್ 14ನ ಜಡ್ಜ್ ಆಗುತ್ತಿದ್ದಾರೆ.
ಹಾಗಂತ ಹಂಸಲೇಖ ಅವರಿಗೆ ಕಿರುತೆರೆ ಹೊಸದಲ್ಲ. ಆದರೆ, ಫಿನಾಲೆಯಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ ಹಂಸಲೇಖ, ಇನ್ನುಮುಂದೆ ಪ್ರತಿವಾರ ನೋಡಲು ಸಿಗುತ್ತಾರೆ. ಒಂದಷ್ಟು ಹೊಸ ಹೊಸ ಗೊತ್ತಿಲ್ಲದ ಕಥೆ, ಪಟ್ಟುಗಳನ್ನು ಹೇಳುತ್ತಾರೆ. ಹಂಸಲೇಖ ಅವರ ಜೊತೆ ವಿಜಯ್‍ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಇರುತ್ತಾರೆ.