ರಚಿತಾ ರಾಮ್‍ಗೆ ಶಾಪವಿತ್ತಾ..? ಎಂಥ ಶಾಪ ಅದು..? ಏನು ಸಮಸ್ಯೆ ಆಗಿತ್ತು..? ಯಾರು ಶಾಪ ಹಾಕಿದ್ದರು..? ಯಾವಾಗ..? ಆದರೆ, ಸ್ಪೆಷಲ್ ಏನು ಗೊತ್ತಾ..? ಅದು ಶಾಪವಷ್ಟೇ ಅಲ್ಲ, ವರವೂ ಹೌದು. ಸುಮ್ನೆ ತಲೆಗೆ ಹುಳ ಬಿಟ್ಕೋಬೇಡಿ.
ರಚಿತಾ ರಾಮ್ ಇಷ್ಟು ದಿನ ಸ್ಟಾರ್ ನಟರಿಗಷ್ಟೇ ನಾಯಕಿಯಾಗ್ತಾರೆ ಅನ್ನೋ ಅಪವಾದವಿತ್ತು. ಅದಕ್ಕೆ ತಕ್ಕಂತೆ ರಚಿತಾ ನಟಿಸಿದ್ದೆಲ್ಲವೂ ಸ್ಟಾರ್ ನಟರ ಜೊತೆಗೆ. ಈಗ ಆ ಶಾಪ ವಿಮೋಚನೆಯಾಗುತ್ತಿದೆ.
ನಿಖಿಲ್ ಅಭಿನಯದ, ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರಕ್ಕೆ ರಚಿತಾ ನಾಯಕಿ. ಬಹುಶಃ ಸ್ಟಾರ್ ಅಲ್ಲದ, ಕೇವಲ 2ನೇ ಚಿತ್ರದಲ್ಲಿ ನಟಿಸುತ್ತಿರುವ ನಾಯಕನ ಜೊತೆ ನಟಿಸುತ್ತಿರುವುದು ರಚಿತಾ ಫಿಲ್ಮಿ ಲೈಫಲ್ಲಿ ಇದೇ ಮೊದಲು.
ಇದರ ಮಧ್ಯೆ ರಚಿತಾ ಮತ್ತೆ ದರ್ಶನ್‍ಗೆ ನಾಯಕಿಯಾಗ್ತಾರೆ ಅನ್ನೋ ಸುದ್ದಿಯಿದೆ. ತೆಲುಗು ಚಿತ್ರವೊಂದರಲ್ಲಿ ನಟಿಸಲು ಒಪ್ಪಿದ್ದಾರೆ ಎನ್ನುವ ಸುದ್ದಿಯೂ ಇದೆ. ದುನಿಯಾ ವಿಜಿ ಜೊತೆ ಜಾನಿ ಜಾನಿ ಯೆಸ್ ಪಪ್ಪಾ ಹಾಗೂ ನೀನಾಸಂ ಸತೀಶ್ ಜೊತೆ ಅಯೋಗ್ಯ ಚಿತ್ರದಲ್ಲಿ ನಟಿಸುತ್ತಿರುವ ರಚಿತಾ, ಈಗ ಫುಲ್ ಬ್ಯುಸಿ.