Print 
duniya vijay, preetham gubbi johnny johnny yes papa,

User Rating: 0 / 5

Star inactiveStar inactiveStar inactiveStar inactiveStar inactive
 
1.5 crore rupee for this set
Johnny Johnny Yes Papa Movie Set

ಜಾನಿ ಜಾನಿ ಯೆಸ್ ಪಪ್ಪಾ.. ದುನಿಯಾ ವಿಜಿ, ರಚಿತಾ ರಾಮ್ ಅಭಿನಯದ, ಪ್ರೀತಮ್ ಗುಬ್ಬಿ ನಿರ್ದೇಶನದ ಸಿನಿಮಾ. ಜಾನಿ ಮೆರಾ ನಾಮ್ ಚಿತ್ರಕ್ಕೂ ಸೆಟ್ ಹಾಕಿದ್ದ ಪ್ರೀತಮ್ ಗುಬ್ಬಿ, ಈ ಚಿತ್ರಕ್ಕೂ ಅದ್ಧೂರಿ ಸೆಟ್ ಹಾಕಿದ್ದಾರೆ. ಮೋಹನ್ ಬಿ.ಕೆರೆಯಲ್ಲಿ ರೈನ್ ಬೋ ಕಾಲನಿ ಎಂಬ ಬಡಾವಣೆಯನ್ನೇ ಸೃಷ್ಟಿಸಿಬಿಟ್ಟಿದ್ದಾರೆ ಪ್ರೀತಮ್.

ಈ ಸೆಟ್ ಸೃಷ್ಟಿಸಲು 50ಕ್ಕೂ ಹೆಚ್ಚು ಬಡಗಿಗಳು, 20 ಮಂದಿ ಆರ್ಟಿಸ್ಟ್‍ಗಳು, ಕಾರ್ಮಿಕರು ಸೇರಿ ಸುಮಾರು 150 ಮಂದಿ ಕೆಲಸ ಮಾಡಿದ್ದಾರೆ. 

ಹಳೇ ಮೈಸೂರು, . ಸೆಟ್‍ನಲ್ಲಿ ಸ್ವಿಮ್ಮಿಂಗ್ ಪೂಲ್, ಬೆಟ್ಟಯ್ಯ ಹೋಟೆಲ್, ಹಲವಾರು ಬೀದಿಗಳು, ರಸೆಲ್ ಮಾರ್ಕೆಟ್, ಟೆಂಪಲ್ ಸ್ಟ್ರೀಟ್, ಶೆಟ್ಟರ ಅಂಗಡಿ ಸೇರಿದಂತೆ ಒಂದು ಬಡಾವಣೆಯನ್ನೇ ಸೃಷ್ಟಿಸಿದ್ದಾರೆ ಪ್ರೀತಮ್ ಗುಬ್ಬಿ.

ಸೆಟ್‍ನಲ್ಲಿ ಕಣ್ಣಿಗೆ ಹೊಡೆಯುವ ಕಲರ್ ಬಳಸಿಲ್ಲ, ಹೀಗಾಗಿ ಇದು ಕ್ಯಾಮೆರಾ ಕಣ್ಣಿನಲ್ಲಿ ಇನ್ನೂ ಅದ್ಭುತವಾಗಿ ಕಾಣಲಿದೆ. ಈ ಸೆಟ್‍ಗಾಗಿಯೇ ಸುಮಾರು ಒಂದೂವರೆ ಕೋಟಿ ಖರ್ಚು ಮಾಡಿದೆಯಂತೆ ಜಾನಿ ಟೀಂ.