` ಪಾಕ್‍ನ ಸಾವಿರಾರು ಸೈನಿಕರನ್ನು ಕ್ಷಣದಲ್ಲಿ ಸಮಾಧಿ ಮಾಡಿದ್ದ ಸೈನಿಕ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
great warrior story
Arun Gowda In 3 Gante 30 Days 30 Seconds

ನಮಗೆ ಕಾರ್ಗಿಲ್ ಕಥೆ ಗೊತ್ತು. ಪಾಕ್ ಸೈನಿಕರನ್ನು ನಮ್ಮ ಸೈನಿಕರು ಹೇಗೆ ಸದೆಬಡಿದರು, ಪ್ರಾಣಾರ್ಪಣೆ ಮಾಡಿದವರೆಷ್ಟು ಜನ.? ಪಾಕಿಸ್ತಾನದ ಕುತಂತ್ರ ಹೇಗಿತ್ತು..? ಹೀಗೆ ನಮಗೆ ಇಂಥ ಹಲವಾರು ಕಥೆಗಳು ಗೊತ್ತು. ಆಧರೆ, ಈ ಕಥೆ ನಿಮಗೆ ಗೊತ್ತಿರುವ ಸಾಧ್ಯತೆ ಕಡಿಮೆ. ಹಾಗೆ ನೋಡಿದರೆ, ಈ ಯೋಧನ ಪರಾಕ್ರಮ, ಸಮಯಸ್ಫೂರ್ತಿಯ ಗೆಲುವು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು ಎಂಬ ವಾದವೂ ಇದೆ.

ಈ ಘಟನೆ ನಡೆದಿದ್ದು ಕಾರ್ಗಿಲ್ ಯುದ್ಧ ಆರಂಭಕ್ಕೂ ಮುನ್ನ. ನೀಲಂ ಕಣಿವೆಯಲ್ಲಿ ಇಂಡಿಯನ್ ಆರ್ಮಿ ಫಾರ್ವರ್ಡ್ ಲಾಜಿಸ್ಟಿಕ್ ಬೇಸ್‍ನಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಪಾಕಿಸ್ತಾನದ ಸಾವಿರಾರು ಯೋಧರು, 40 ಟ್ಯಾಂಕರ್ ಆಕ್ರಮಣಕ್ಕೆ ಸಿದ್ಧರಾಗಿದ್ದರು. ಆದರೆ, ಭಾರತದ ಬಳಿ ಇದ್ದದ್ದು ಕೇವಲ ನೂರು ಸೈನಿಕರು. ಸ್ವಲ್ಪ ಏಮಾರಿದರೆ ಟಿತ್‍ಪಾಲ್ ಪ್ರಾಂತ್ಯ ಕೈತಪ್ಪುವ ಭೀತಿಯಿತ್ತು. 

ಆದರೆ ಅಲ್ಲೊಬ್ಬ ಸೈನಿಕನಿದ್ದ. ಆತ ಎಂತಹ ಪರಾಕ್ರಮ & ಬುದ್ದಿವಂತಿಕೆ ಮೆರೆದನೆಂದರೆ, ಪಾಕ್ ಸೈನಿಕರು ಗೊತ್ತೇ ಆಗದಂತೆ ಸಮಾಧಿಯಾಗಿಬಿಟ್ಟರು. ಆಗ ಅಲ್ಲಿದ್ದ ಯೋಧ ಕ್ಯಾ.ಸುಂದರಂ, ತಕ್ಷಣ ಶೌರ್ಯ ಮತ್ತು ತಲೆ ಎರಡನ್ನೂ ಉಪಯೋಗಿಸಿದರು.ಅಲ್ಲಿದ್ದ 30 ಡಿಗ್ರಿ ಆ್ಯಂಗಲ್‍ನಲ್ಲಿದ್ದ ಮಾಸ್ ರಾಕ್ ಬಂಡೆಯೊಂದರ ಬಿರುಕನ್ನು ಗುರುತಿಸಿದ್ದರು. ಅದು ಬಿರುಕುಬಿಟ್ಟಿತ್ತು. ತಡಮಾಡದೆ, ತಮ್ಮ ಸೈನಿಕರಿಂದ ಕವರ್ ಫೈರಿಂಗ್ ತೆಗೆದುಕೊಂಡು ಮುಂದುವರಿದರು. ಆ ಬಿರುಕಿಗೇ ಗ್ರೈನೇಡ್ ಫಿಕ್ಸ್ ಮಾಡಿ ನೆಗೆದುಬಿಟ್ಟರು. 

ನಂತರ ಸೃಷ್ಟಿಯಾಗಿದ್ದು ಹಿಮಪಾತ. ಹಿಮಪಾತ ಬಿದ್ದಿದ್ದು ದಾಳಿಗೆ ಸಿದ್ಧರಾಗಿದ್ದ ಪಾಕ್ ಸೈನಿಕರ ಮೇಲೆ. ನೋಡ ನೋಡುತ್ತಲೇ ಸಮಾಧಿಯಾಗಿ ಹೋದರು. ಇಂದಿಗೂ ಅದನ್ನು ಪಾಕಿಸ್ತಾನ ನೈಸರ್ಗಿಕ ಹಿಮಪಾತ ಎಂದು ಹೇಳಿಕೊಂಡೇ ಬರುತ್ತಿದೆ.

ಆದರೆ, ಅಂದು ಶಿಖರದ ಮೇಲೆ ಹೋಗಿ, ಬಿರುಕಿಗೆ ಗ್ರೈನೇಡ್ ಇಟ್ಟು ಬಂದ ಕ್ಯಾ. ಸುಂದರಂ ಇಂದಿಗೂ ಇದ್ದಾರೆ. ಅಂದಿನ ಆ ಪರಾಕ್ರಮ ಅವರ ಬದುಕನ್ನೇ ಕಿತ್ತುಕೊಂಡಿದೆ. ಅವರಿಗೆ ಕಣ್ಣು ಕಾಣಲ್ಲ. ಕಿವಿ ಕೇಳಲ್ಲ. ಮಾತನಾಡೋಕೆ ಆಗಲ್ಲ. 

ಬೇರೆಯವರಾಗಿದ್ದರೆ ಹುಚ್ಚರಾಗುತ್ತಿದ್ದರೇನೋ.. ಆದರೆ, ಒಬ್ಬ ಹೆಣ್ಣು ಮಗಳ ಪ್ರೀತಿ ಸುಂದರಂ ಬದುಕನ್ನು ಸಹನೀಯವಾಗಿಸಿದೆ. ಸುಂದರವಾಗಿಸಿದೆ. ಅಂದಹಾಗೆ, ತೆರೆಗೆ ಬರಲು ಸಿದ್ಧವಾಗಿರುವ 3 ಗಂಟೆ 30 ದಿನ, 30 ಸೆಕೆಂಡು ಸಿನಿಮಾದಲ್ಲಿರೋದು ಇದೇ ಕ್ಯಾ.ಸುಂದರಂ ಕಥೆ. ಆ ಪಾತ್ರದಲ್ಲಿ ನಟಿಸುತ್ತಿರುವುದು ಡೈನಮಿಕ್ ಸ್ಟಾರ್ ದೇವರಾಜ್. ಅವರ ಸಾಹಸ ಹಾಗೂ ಬದುಕಿನ ಸ್ಫೂರ್ತಿಯ ಕಥೆಯನ್ನು ಮಿಸ್ ಮಾಡದೇ ನೋಡಿ. ಅದು ಒಬ್ಬ ಯೋಧನ ಸಾಹಸ & ಪ್ರೀತಿಯ ಕಥೆ.

#

Edakallu GuddadaMele Movie Gallery

Rightbanner02_backasura_inside

Dandupalya 3 Movie Gallery