` ಸ್ಮಗ್ಲರ್‍ನಲ್ಲಿ ಚೆನ್ನೈ ಎಕ್ಸ್‍ಪ್ರೆಸ್ ಸ್ಟಂಟ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
chennai express stunts in smuggler
Priya Hassan In Smuggler

ಸ್ಮಗ್ಲರ್ ಚಿತ್ರಕ್ಕೂ, ಶಾರೂಖ್ ಅಭಿನಯದ ಚೆನ್ನೈ ಎಕ್ಸ್‍ಪ್ರೆಸ್ ಚಿತ್ರಕ್ಕೂ ಏನಂತಾ ನಂಟು ಅಂದ್ಕೊಂಡ್ರಾ..? ಪ್ರಿಯಾ ಹಾಸನ್ ನಾಯಕತ್ವದ ಈ ಚಿತ್ರಕ್ಕೆ ಸ್ಟಂಟ್ ಮಾಡಿಸಿರುವುದು ರಾಜೇಶ್ ಖನ್ನಾ.

ಈ ರಾಜೇಶ್ ಖನ್ನಾ ಹಿಂದಿಯ ಚೆನ್ನೈ ಎಕ್ಸ್‍ಪ್ರೆಸ್ ಸೇರಿದಂತೆ ಹಲವು ಚಿತ್ರಗಳಿಗೆ ಸ್ಟಂಟ್ ಮಾಡಿದ್ದವರು. ಅವರ ಜೊತೆ ಕೌರವ ವೆಂಕಟೇಶ್ ಕೂಡಾ ಕೆಲವು ಫೈಟಿಂಗ್ ಸಂಯೋಜಿಸಿದ್ದಾರೆ. 

ಚಿತ್ರದಲ್ಲಿ ಒಟ್ಟು 4 ಫೈಟ್‍ಗಳಿವೆಯಂತೆ. ಅದರಲ್ಲೂ ಬೈಕ್ ಓಡಿಸುತ್ತಲೇ ಸಾಹಸ ಮಾಡುವ ದೃಶ್ಯ. ಆ ಫೈಟ್ ಆಯೋಜಿಸಿದ್ದವರು ಕೌರವ ವೆಂಕಟೇಶ್. ಡ್ಯೂಪ್ ಬಳಸದೆಯೇ ಸ್ಟಂಟ್ ಮಾಡಿದ್ದಾರಂತೆ ಪ್ರಿಯಾ. ಇನ್ನೊಂದು ಫೈಟ್‍ಗಾಗಿ 30 ಕ್ಯಾಮೆರಾ ಬಳಸಿ ಶೂಟ್ ಮಾಡಲಾಗಿದೆಯಂತೆ. 

ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಸ್ಮಗ್ಲರ್, ಇಂಥ ಕಾರಣಗಳಿಂದಾಗಿಯೇ ಕುತೂಹಲ ಕೆರಳಿಸಿದೆ.

Adhyaksha In America Success Meet Gallery

Ellidhe Illitanaka Movie Gallery