` ಒಟ್ಟಿಗೇ ನಟಿಸೋಕೆ ಗಣೇಶ್-ವಿಜಿ ರೆಡಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
duniya viji ganesh in preetham gubbi's next
Duniya Viji, Ganesh Image

ಮುಂಗಾರು ಮಳೆ ಮತ್ತು ದುನಿಯಾ. ದಶಕದ ಹಿಂದೆ ಏಕಕಾಲದಲ್ಲಿ ಬಿಡುಗಡೆಯಾಗಿದ್ದ ಎರಡೂ ಚಿತ್ರಗಳು ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿಬಿಟ್ಟವು. ಹಲವು ಸ್ಟಾರ್‍ಗಳನ್ನು ಉಡುಗೊರೆಯಾಗಿ ಕೊಟ್ಟವು. ಮಳೆ ಗಣೇಶ್‍ಗೆ ವರವಾದರೆ, ವಿಜಿಗೆ ದುನಿಯಾ, ಅದೃಷ್ಟದ ಬಾಗಿಲು ತೆರೆದಿತ್ತು.

ಈಗ.. ಆ ಎರಡೂ ಚಿತ್ರಗಳ ಸ್ಟಾರ್‍ಗಳು ಒಟ್ಟಿಗೇ ನಟಿಸೋಕೆ ಮನಸ್ಸು ಮಾಡಿದ್ದಾರೆ. ವಿಜಿ ನನಗೆ ಒಂದು ರೀತಿ ಗಾಡ್‍ಫಾದರ್ ಇದ್ದಂತೆ ಎಂದು ಹೇಳಿಕೊಳ್ಳುವ ಗಣೇಶ್, ತಮ್ಮದೇ ಬ್ಯಾನರ್‍ನಲ್ಲಿ ಚಿತ್ರ ನಿರ್ಮಿಸುವ ಉತ್ಸಾಹ ತೋರಿಸಿದ್ದಾರೆ.

ಈ ಮಲ್ಟಿ ಸ್ಟಾರ್ ಚಿತ್ರಕ್ಕೆ ನಿರ್ದೇಶಕರಾಗಿರುವುದು ಪ್ರೀತಮ್ ಗುಬ್ಬಿ. ಇಬ್ಬರಿಗೂ ಗೆಳೆಯ. ಮುಂಗಾರು ಮಳೆ ತಂಡದಲ್ಲಿದ್ದವರು. ಈಗಾಗಲೇ ಗಣೇಶ್‍ಗೆ ಒಂದು, ದುನಿಯಾ ವಿಜಯ್‍ಗೆ ಒಂದು ಚಿತ್ರ ನಿರ್ದೇಶಿಸಿದ್ದಾರೆ. ಈಗ ದುನಿಯಾ ವಿಜಯ್ ಜೊತೆ ಎರಡನೇ ಚಿತ್ರ ಜಾನಿ ಜಾನಿ ಯೆಸ್ ಪಪ್ಪಾ ಚಿತ್ರ ನಿರ್ದೇಶಿಸುತ್ತಿರುವ ಪ್ರೀತಮ್, ಅದು ಮುಗಿದ ನಂತರ ಈ ಚಿತ್ರ ಕೈಗೆತ್ತಿಕೊಳ್ಳಲಿದ್ದಾರಂತೆ.

ಗಣೇಶ್ ಮತ್ತು ವಿಜಯ್ ಒಪ್ಪಿದ್ದಾರೆ ಎನ್ನುವುದನ್ನು ಹೊರತುಪಡಿಸಿ, ಚಿತ್ರದ ಕಥೆ, ಕಲಾವಿದರು, ತಂತ್ರಜ್ಞರು ಯಾರೊಬ್ಬರ ಆಯ್ಕೆಯೂ ಇನ್ನೂ ಆಗಿಲ್ಲ. ವಿಜಿ ಹಾಗೂ ಗಣೇಶ್ ಇಬ್ಬರೂ ಒಟ್ಟಿಗೇ ನಟಿಸುತ್ತಿರುವುದನ್ನು ಕಲ್ಪನೆ ಮಾಡಿಕೊಂಡೇ ಥ್ರಿಲ್ ಆಗಿದ್ದಾರೆ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery