` ಅಲ್ಲಿ ಹಂಗೆ.. ಇಲ್ಲಿ ಹಿಂಗೆ.. ಕ್ಯಾರೆಕ್ಟರ್ ಹೆಂಗೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
amy jackson's role
Amy Jackson Image

ದಿ ವಿಲನ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಕಾಂಬಿನೇಷನ್, ಜೋಗಿ ಪ್ರೇಮ್ ಡೈರೆಕ್ಷನ್ ಹಾಗೂ ಮನೋಹರ್ ನಿರ್ಮಾಣದ ಅದ್ಧೂರಿ ಚಿತ್ರ. ಶೂಟಿಂಗ್ ಹಂತದಿಂದಲೇ ಭರ್ಜರಿಯಾಗಿ ಸುದ್ದಿ, ಸದ್ದು ಮಾಡುತ್ತಿದೆ. ಈಗ ಅಂಥದ್ದೇ ಕುತೂಹಲ ಮೂಡಿಸಿರುವುದು ಆ್ಯಮಿ ಜಾಕ್ಸನ್.

ಚಿತ್ರದ ಆರಂಭದ ಫೋಟೋಗಳಲ್ಲಿ ಈ ಫಾರಿನ್ ಸುಂದರಿ ಕಂಪ್ಲೀಟ್ ಮಾಡರ್ನ್ ಆಗಿ ಕಣ್ಣು ತಂಪು ಮಾಡಿದ್ದರು. ಈಗ ಚಿಕ್ಕಮಗಳೂರಿನಿಂದ ಬರುತ್ತಿರುವ ಹೊಸ ಫೋಟೋಗಳಲ್ಲಿ ಅದೇ ಆ್ಯಮಿ ಜಾಕ್ಸನ್ ಹಳ್ಳಿ ಹುಡುಗಿಯಾಗಿ ಕಂಗೊಳಿಸುತ್ತಿದ್ದಾರೆ.

ಹಾಗಾದರೆ, ಏನಿದು..? ಚಿತ್ರದಲ್ಲಿ ಅವರ ಪಾತ್ರ ಎಂಥದ್ದು..? ಅಲ್ಲಿ ಹಂಗೆ.. ಇಲ್ಲಿ ಹಿಂಗೆ.. ಕ್ಯಾರೆಕ್ಟರ್ ಹೆಂಗೆ..? ಪ್ರೇಮ್ ಅವರನ್ನ ಕೇಳಿ ನೋಡಿ.. ನೋಡಾಣಂತೆ ಬಿಡಣ್ಣ.. ಸಿನಿಮಾ ರಿಲೀಸ್ ಆದ್ಮೇಲೆ ನಿಮ್ಗೇ ಗೊತ್ತಾಗ್ತದೆ ಅಂತಾರೆ.

Yajamana Movie Gallery

Bazaar Movie Gallery