ಲವ್ಲಿ ಸ್ಟಾರ್ ಪ್ರೇಮ್ ಹೋಟೆಲ್ ಶುರು ಮಾಡಿದ್ದಾರೆ. ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವಾಗಲೇ ಉದ್ಯಮ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಗೆಳೆಯರ ಜೊತೆ ಸೇರಿ ರೆಸ್ಟೋರೆಂಟ್‍ವೊಂದನ್ನು ಶುರು ಮಾಡುತ್ತಿದ್ದಾರೆ.
ಸಿನಿಮಾ ನನ್ನ ಮೊದಲ ಆದ್ಯತೆ. ರೆಸ್ಟೋರೆಂಟ್‍ಗೆ ಬಂದಿರೋದು ಗೆಳೆಯರ ಮೇಲಿನ ಪ್ರೀತಿಗಾಗಿ. ಉದ್ಯಮದಲ್ಲಿಯೂ ಯಶಸ್ಸು ಸಾಧಿಸಬೇಕೆಂಬ ಆಸೆಯಿದೆ ಎಂದಿದ್ದಾರೆ ಪ್ರೇಮ್.
ಪ್ರೇಮ್ ಇವತ್ತು ಲವ್ಲಿ ಸ್ಟಾರ್ ಆಗಿರಬಹುದು. ಆದರೆ, ಜೀವನದ ಪ್ರತಿ ಹಂತದಲ್ಲಿಯೂ ಕಷ್ಟನಷ್ಟಗಳನ್ನು ಅನುಭವಿಸಿಕೊಂಡೇ ಬೆಳೆದವರು ಪ್ರೇಮ್. ಪ್ರೇಮ್ ಅವರ ಹೊಸ ಉದ್ಯಮ ಸಾಹಸಕ್ಕೆ ಶುಭವಾಗಲಿ.