` ಸುಳ್ ಸುಳ್ಳೇ ಸಾಯಿಸಿದವರನ್ನ ಸುಮ್ನೆ ಬಿಡಲ್ಲ...! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
tarun sudhir files complaint
Tarun Sudhir Image

ಹಿರಿಯ ನಟ ಶಿವರಾಮ್, ಗಾಯಕಿ ಕೋಗಿಲೆ ಎಸ್.ಜಾನಕಿ, ರಂಗಭೂಮಿ ನಟಿ, ಗಾಯಕಿ, ಮಾಜಿ ಸಂಸದರೂ ಆಗಿರುವ ಜಯಶ್ರೀ, ಹಾಸ್ಯನಟ ಉಮೇಶ್, ನಿರ್ದೇಶಕ ತರುಣ್ ಸುಧೀರ್.. ಒಬ್ಬಿಬ್ಬರಲ್ಲ.. ಇತ್ತೀಚೆಗೆ.. ಇತ್ತೀಚೆಗೆ ಏಕೆ.. ಕಳೆದ ವಾರ ಇವರೆಲ್ಲ ನಿಧನರಾದರು ಎಂದು ದೊಡ್ಡ ಸುದ್ದಿಯೇ ಆಗಿಬಿಟ್ಟಿತ್ತು.

ಎಲ್ಲರೂ ನಾನು ಬದುಕಿದ್ದೇನೆ..  ನಾನು ಬದುಕಿದ್ದೇನೆ.. ಎಂದು ಘೋಷಿಸಿಕೊಳ್ಳಬೇಕಾಯ್ತು. ಇವೆಲ್ಲ ಸೃಷ್ಟಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ. ಇವನ್ನೆಲ್ಲ ಯಾರು, ಏಕೆ ಹಬ್ಬಿಸುತ್ತಾರೋ ಗೊತ್ತಿಲ್ಲ. ಅದನ್ನು ವಿಕೃತಿ ಎನ್ನದೆ ಬೇರೆ ದಾರಿಯಿಲ್ಲ.

ತರುಣ್ ಸುಧೀರ್ ಅವರಂತೂ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ಲಿಖಿತ ದೂರನ್ನೇ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸುನಿಲ್ ಕುಮಾರ್ ಅವರಿಗೂ ದೂರು ನೀಡಿದ್ದಾರೆ. ಇದಕ್ಕೆ ಕಡಿವಾಣ ಹಾಕದೇ ಇದ್ದರೆ, ಈ ವಿಕೃತಿಗೆ ಬ್ರೇಕ್ ಬೀಳಲ್ಲ, ಇಂಥವರಿಗೆ ತಕ್ಕ ಪಾಠ ಕಲಿಸಲೇಬೇಕು ಅನ್ನೊದು ತರುಣ್ ಸುಧೀರ್ ಮಾತು.

ತರುಣ್ ಅವರನ್ನು ಬಿಟ್ಟರೆ, ಉಳಿದಂತೆ ಬದುಕಿದ್ದೂ ಸಾಯಿಸಲ್ಪಟ್ಟವರ್ಯಾರೂ ಪೊಲೀಸ್ ಠಾಣೆ ಮೆಟ್ಟಿಲೇರಿಲ್ಲ. ಹಾಗಂತ ಅವರಿಗೆ ಬೇಸರ ಇಲ್ಲ ಎಂದರ್ಥವಲ್ಲ. ಇಂಥವರಿಗೆ ಕಡಿವಾಣ ಹಾಕಬೇಕಾದ ಅಗತ್ಯವಂತೂ ಇದೆ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery