Print 
bharjari chethan kumar

User Rating: 0 / 5

Star inactiveStar inactiveStar inactiveStar inactiveStar inactive
 
bharjari chethan's next is james
Bharjari Chethan Image

ಭರ್ಜರಿಯಂತಹಾ ಸೂಪರ್ ಹಿಟ್ ಚಿತ್ರ ನಿರ್ದೇಶಿಸಿದ ಚೇತನ್ ಕುಮಾರ್, ಧ್ರುವಾ ಜೊತೆ ಎರಡು ಹಿಟ್ ಕೊಟ್ಟವರು. ಎಲ್ಲವೂ ಅಂದುಕೊಂಡಂತೆ, ಪ್ಲಾನ್ ಪ್ರಕಾರ ಆಗಿದ್ದರೆ, ಇಷ್ಟು ಹೊತ್ತಿಗೆ ಚೇತನ್, ನಿಖಿಲ್ ಅಭಿನಯದ ಹೊಸ ಚಿತ್ರ ನಿರ್ದೇಶಿಸಬೇಕಿತ್ತು. ಅದೇನಾಯ್ತೋ ಏನೋ.. ಚೇತನ್ ಪ್ರಾಜೆಕ್ಟ್‍ನಿಂದ ಹೊರಬಂದರು. ಚಿತ್ರವೇ ನಿಂತು ಹೋಯ್ತು. ಈಗ ಚೇತನ್, ಹೊಸ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ.

ಯಾರು ಹೀರೋ..? ಕಥೆ ಏನು..? ಎಂದರೆ, ಚೇತನ್ ಗುಟ್ಟು ಬಿಡೋದಿಲ್ಲ. ಕತೆ, ಚಿತ್ರಕತೆ ಕುರಿತು ಸ್ಕ್ರಿಪ್ಟ್ ವರ್ಕ್ ನಡೀತಾ ಇದೆ. ಭರ್ಜರಿ ಚಿತ್ರದ ಶತದಿನೋತ್ಸವದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎನ್ನುತ್ತಾರೆ ಚೇತನ್.

ಒಂದು ಮಾಹಿತಿ ಪ್ರಕಾರ, ಚೇತನ್ ಕಥೆ ಸಿದ್ಧ ಮಾಡುತ್ತಿರುವುದು ಪುನೀತ್‍ಗೆ. ಜೇಮ್ಸ್ ಚಿತ್ರಕ್ಕೆ ಕಥೆ,ಚಿತ್ರಕಥೆ ಸಿದ್ಧ ಮಾಡುತ್ತಿದ್ದಾರೆ. ಈಗಾಗಲೇ ಶಶಾಂಕ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಪುನೀತ್, ಅದೇ ವೇಳೆ ಜೇಮ್ಸ್ ಚಿತ್ರಕ್ಕೂ ಡೇಟ್ಸ್ ಕೊಡಲು ನಿರ್ಧರಿಸಿದ್ದಾರಂತೆ.