ಕಿರಿಕ್ ಪಾರ್ಟಿಯ ಸಕ್ಸಸ್ ಹಾಗೂ ರಕ್ಷಿತ್ ಶೆಟ್ಟಿಯ ಜೊತೆಗಿನ ಎಂಗೇಜ್‍ಮೆಂಟ್‍ನಿಂದಲೇ ಸುದ್ದಿಯಾಗಿದ್ದ ರಶ್ಮಿಕಾಗೆ ಡಿಸೆಂಬರ್‍ನಲ್ಲಿ ಸಿನಿಮಾಗಳ ಸುನಾಮಿಯೇ ಇದೆ. ಕಿರಿಕ್ ಪಾರ್ಟಿ ನಂತರ ಒಪ್ಪಿಕೊಂಡಿದ್ದ ಅಂಜನೀಪುತ್ರ, ಈ ತಿಂಗಳಲ್ಲೇ ರಿಲೀಸ್ ಆಗುವ ಸಾಧ್ಯತೆಗಳಿವೆ. ಆಡಿಯೋ ಬಿಡುಗಡೆಯಾಗಿದ್ದು, ಹಾಡುಗಳು ಹಿಟ್ ಆಗಿವೆ.
ಇನ್ನು ಚಮಕ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಆಡಿಯೋ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 4ರಂದು ಚಮಕ್ ಚಿತ್ರದ ಆಡಿಯೋ ರಿಲೀಸ್ ಇದೆ. ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಆಡಿಯೋ ಬಿಡುಗಡೆಗೆ ವಿಶೇಷ ಅತಿಥಿ. ಈ ಸಿನಿಮಾನೂ ಡಿಸೆಂಬರ್‍ನಲ್ಲೇ ರಿಲೀಸ್ ಆಗುವ ಚಾನ್ಸ್ ಇದೆ.
ಇನ್ನು ತೆಲುಗಿನ ಚಲೋ ಚಿತ್ರದ ಆಡಿಯೋ ಕೂಡಾ ಬಿಡುಗಡೆಯಾಗಿದ್ದು, ಆ ಚಿತ್ರವೂ ಡಿಸೆಂಬರ್‍ನಲ್ಲೇ ರಿಲೀಸ್ ಆಗುವ ಸಾಧ್ಯತೆಗಳಿವೆ. ಎಲ್ಲವೂ ಪ್ಲಾನ್‍ನಂತೆಯೇ ನಡೆದುಬಿಟ್ಟರೆ, ಒಂದೇ ತಿಂಗಳಲ್ಲಿ ರಶ್ಮಿಕಾ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾದ ದಾಖಲೆ ಸೃಷ್ಟಿಯಾಗಲಿದೆ.