` ಗಂಡೊಂದು.. ಹೆಣ್ಣೆರಡು.. ರಿಯಲ್ `ತ್ರಿ' ಲವ್ ಸ್ಟೋರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sandalwood stars triangle love story
Anika Sindhya, Sachin, Karunya Ram Image

ಸ್ಯಾಂಡಲ್‍ವುಡ್‍ಗಷ್ಟೇ ಅಲ್ಲ, ಜಗತ್ತಿನ ಯಾವುದೇ ಸಿನಿಮಾ ರಂಗದವರಿಗೆ ಲವ್‍ಸ್ಟೋರಿಗಳು ಹಾಟ್ ಫೇವರಿಟ್. ತ್ರಿಕೋನ ಪ್ರೇಮಕತೆಗಳಿಗಂತೂ ಬರವೇ ಇಲ್ಲ. ರಿಯಲ್ ಲೈಫಲ್ಲಿ ಕೂಡಾ ನಡೆಯುತ್ತವಾದರೂ ಹೊರಗೆ ಬರೋದು ಕಡಿಮೆ. ಆದರೆ, ಸ್ಯಾಂಡಲ್‍ವುಡ್‍ನಲ್ಲಿದ್ದವರೇ ಇಂಥಾದ್ದೊಂದು ತ್ರಿಕೋನ ಪ್ರೇಮಕತೆಯಲ್ಲಿ ಸಿಕ್ಕಿ ಬೀಳೋದು ಅಪರೂಪ. ಅಂಥಾದ್ದೊಂದು ಟ್ರಯಾಂಗಲ್ ಲವ್‍ಸ್ಟೋರಿಯ ಇಬ್ಬರು ನಾಯಕಿಯರು ಅನಿಕಾ ಸಿಂಧ್ಯಾ ಹಾಗೂ ಕಾರುಣ್ಯ ರಾಮ್. ಅವರಿಬ್ಬರ ನಾಯಕನ ಹೆಸರು ಸಚಿನ್.

ನಡೆದಿರೋದು ಇಷ್ಟು. ಕಾರುಣ್ಯ ಹಾಗೂ ಸಚಿನ್ ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದವರು. 7 ವರ್ಷದ ಪ್ರೀತಿಗೆ ಮದುವೆಯ ಅಂಕಿತ ಬೀಳಲಿಲ್ಲ. ಮನೆಯಲ್ಲೇನೋ ಸಮಸ್ಯೆಯಾಗಿ, ಇಬ್ಬರೂ ದೂರವಾಗಲು ನಿರ್ಧರಿಸಿದರು. ಹಾಗಂತ, ಸ್ನೇಹ ಮುರಿದು ಬೀಳಲಿಲ್ಲ. ಅದು ಸಾಗುತ್ತಲೇ ಇತ್ತು.

ಇದರ ಮಧ್ಯೆ ಸಚಿನ್‍ಗೆ ಅನಿಕಾ ಸಿಂಧ್ಯಾ ಜೊತೆ ಮದುವೆ ಫಿಕ್ಸ್ ಆಯ್ತು. ಎಂಗೇಜ್‍ಮೆಂಟ್ ಕೂಡಾ ಆಗಿ ಹೋಯ್ತು. ಅದಾದ ಮೇಲೆ ಕಾರುಣ್ಯ ರಾಮ್‍ಗೆ ಮತ್ತೆ ಸಚಿನ್ ಬೇಕು ಅನ್ನಿಸೋಕೆ ಶುರುವಾಯ್ತು. ಆಗ, ಸಚಿನ್ ತಾಯಿ ಬಳಿಗೆ ಹೋದ ಕಾರುಣ್ಯ, ನನ್ನನ್ನೇ ನಿಮ್ಮ ಸೊಸೆಯಾಗಿ ಮಾಡಿಕೊಳ್ಳಿ ಎಂದಿದ್ದಾರಂತೆ. ಅದು ಅನಿಕಾಗೆ ಗೊತ್ತಾಗಿದೆ. 

ಕೊನೆಗೆ ಅನಿಕಾ ಮಾಧ್ಯಮಗಳ ಎದುರು ಬಂದು, ನಾನು ಮದುವೆಯಾಗುವ ಹುಡುಗನ ಜೊತೆ ನಿನಗೇನು ಸಂಬಂಧ ಎಂದು ಕಾರುಣ್ಯಾರನ್ನು ಪ್ರಶ್ನಿಸಿದ್ದಾರೆ. ಕಾರುಣ್ಯ, ತನ್ನ ನಿಶ್ಚಿತಾರ್ಥ ಮುರಿಯಲು ನೋಡುತ್ತಿದ್ದಾರೆ ಅನ್ನೋದು ಅನಿಕಾ ಆರೋಪ.

ಆದರೆ, ಕಾರುಣ್ಯ ಹೇಳೋದೇ ಬೇರೆ. ಅವರು ಸಚಿನ್ ಜೊತೆಗಿನ ಸ್ನೇಹವನ್ನು ನಿರಾಕರಿಸೋದಿಲ್ಲ. ಆದರೆ, ಇಲ್ಲದ ಕಲ್ಪನೆಗಳನ್ನೆಲ್ಲ ಮಾಡಿಕೊಳ್ಳಬೇಡಿ. ಆ ಸ್ನೇಹ ಈಗಲೂ ಇದೆ. ನಾನು ಯಾರನ್ನೂ ಬೆದರಿಸಿಲ್ಲ ಎಂದಿದ್ದಾರೆ. ವಿವಾದ ಇನ್ನೂ ಬಗೆಹರಿದಿಲ್ಲ.

ಅಂದಹಾಗೆ ಕಾರುಣ್ಯ ರಾಮ್, ವಜ್ರಕಾಯ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಹುಡುಗಿ. ಕಿರಗೂರಿನ ಗಯ್ಯಾಳಿಗಳು, ಎರಡು ಕನಸು  ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಅನಿಕಾ ಸಿಂಧ್ಯಾ, ಕಿರುತೆರೆಯಲ್ಲಿ ಫೇಮಸ್. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ವಿಲನ್ ನೇತ್ರಾ ಖ್ಯಾತಿಯಿದೆ. ಇನ್ನೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಆದರೆ, ಸಚಿನ್‍ಗೆ ಬಣ್ಣದ ಲೋಕದ ಪರಿಚಯ ಇಲ್ಲ. ಆತ ಉದ್ಯಮಿ. ಅನಿಕಾ ಹೇಳೋ ಪ್ರಕಾರ, ಸಚಿನ್, ಅನಿಕಾ ಅವರ ತಂದೆಯ ಜೊತೆ ಹಲವು ವರ್ಷಗಳಿಂದ ಬ್ಯುಸಿನೆಸ್ ಪಾರ್ಟ್‍ನರ್.  ಒಟ್ಟಿನಲ್ಲಿ ಈ ಪ್ರೇಮಕತೆಯಲ್ಲಿ ಸೀರಿಯಲ್ ಹಾಗೂ ಸಿನಿಮಾಗಳಿಗೆ ಬೇಕಾದಷ್ಟು ಸರಕು ಇರುವುದಂತೂ ನಿಜ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery