ಸದ್ಯಕ್ಕೆ ಕುರುಕ್ಷೇತ್ರ ಚಿತ್ರದಲ್ಲಿ ಬ್ಯುಸಿಯಾಗಿರುವ ದರ್ಶನ್, 51ನೇ ಚಿತ್ರಕ್ಕೆ ಸಿದ್ಧತೆಯನ್ನೂ ನಡೆಸುತ್ತಿದ್ದಾರೆ. ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣದ, ಪಿ.ಕುಮಾರ್ ನಿರ್ದೇಶನದ ಚಿತ್ರಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದೆ.
ಈ ಚಿತ್ರದಲ್ಲಿ ದರ್ಶನ್‍ಗೆ ರಚಿತಾ ರಾಮ್ ಆಯ್ಕೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಚಿತ್ರತಂಡ ರಚಿತಾ ಅವರನ್ನು ಸಂಪರ್ಕಿಸಿದ್ದು, ಇನ್ನೂ ಫೈನಲ್ ಆಗಿಲ್ಲ.
ರಚಿತಾ ರಾಮ್, ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದೇ ಬುಲ್‍ಬುಲ್ ಚಿತ್ರದ ಮೂಲಕ. ದರ್ಶನ್‍ಗೆ ಜೋಡಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ರಚಿತಾ, ನಂತರ ಅಂಬರೀಷ ಚಿತ್ರದಲ್ಲೂ ದರ್ಶನ್‍ಗೆ ಜೋಡಿಯಾಗಿದ್ದರು. ಈ ಚಿತ್ರದಲ್ಲಿ ಮತ್ತೆ ಇಬ್ಬರೂ ಜೋಡಿಯಾದರೆ, ಹ್ಯಾಟ್ರಿಕ್ ಆಗಬಹುದು.
ಸದ್ಯಕ್ಕೆ ರಚಿತಾ, ಜಾನಿ ಜಾನಿ ಯೆಸ್ ಪಪ್ಪಾ ಹಾಗೂ ಅಯೋಗ್ಯ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.