` ಚಿತ್ರಲೋಕ ವೀರೇಶ್​​ಗೆ ಮಾಧ್ಯಮ ಅಕಾಡೆಮಿ ಪುರಸ್ಕಾರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
km veeresh gets madhyama academy award
Km Veeresh

ಚಿತ್ರಲೋಕ ಡಾಟ್ ಕಾಮ್. ಕನ್ನಡದ ನಂಬರ್ ಒನ್ ಸಿನಿಮಾ ವೆಬ್​ಸೈಟ್. ಜನಮೆಚ್ಚುಗೆಯ ಈ ವೆಬ್​ಸೈಟ್​ಗೀಗ ಸಂಭ್ರಮದ ಸಮಯ. ಚಿತ್ರಲೋಕದ ಸಂಪಾದಕರಾದ ಕೆ.ಎಂ. ವೀರೇಶ್ ನಾಯಕರಿಗೆ ಮಾಧ್ಯಮ ಅಕಾಡೆಮಿ ಗೌರವ ಸಿಕ್ಕಿದೆ. ಅಬಿಮಾನಿ ಪ್ರಕಾಶನದಿಂದ ಕೊಡಮಾಡುವ ಅರಗಿಣಿ ಪ್ರಶಸ್ತಿ ಈ ವರ್ಷ ವೀರೇಶ್ ಅವರಿಗೆ ಸಂದಿದೆ. 

ವಿಶೇಷವೆಂದರೆ, ಅದೇ ಅಭಿಮಾನ ಬಳಗದ ಪತ್ರಿಕೆಯಲ್ಲಿ ವೀರೇಶ್ ವೃತ್ತಿ ನಿರ್ವಹಿಸಿದ್ದರು. ಸುಮಾರು 30 ವರ್ಷದ ವೃತ್ತಿ ಜೀವನದಲ್ಲಿ ಕ್ರೀಡಾ ವರದಿಗಾರರಾಗಿ, ಕ್ರೈಂ, ಕ್ರೀಡೆ.. ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ವೀರೇಶ್, ಕನ್ನಡ ಪತ್ರಿಕಾಲೋಕದ ಸೆನ್ಸೇಷನಲ್ ಫೋಟೋಗ್ರಾಫರ್​ಗಳಲ್ಲಿ ಒಬ್ಬರು. ಪ್ರಜಾವಾಣಿ, ಸುಧಾ, ತರಂಗ, ಕನ್ನಡ ಪ್ರಭ, ಮಂಗಳ, ಕನ್ನಡಪ್ರಭ, ಉದಯವಾಣಿ.. ಹೀಗೆ ಹಲವು ಪತ್ರಿಕೆಗಳಲ್ಲಿ ಛಾಯಾಗ್ರಾಹಕರಾಗಿ, ವರದಿಗಾರರಾಗಿ ಕೆಲಸ ಮಾಡಿದ್ದಾರೆ.

ಭಾರತದಲ್ಲಿನ್ನೂ ಇಂಟರ್​ನೆಟ್ ಕಣ್ಣು ಮಿಟುಕಿಸುತ್ತಿದ್ದಾಗ, ಗೂಗಲ್ ಭಾರತಕ್ಕೆ ಕಾಲೇ ಇಟ್ಟಿರದ ಸಂದರ್ಭದಲ್ಲಿ 2000ನೇ ಇಸವಿಯಲ್ಲಿ ವೀರೇಶ್ ಆರಂಭಿಸಿದ ಚಿತ್ರಲೋಕ, ಕನ್ನಡ ಪತ್ರಿಕೋದ್ಯಮ ಇತಿಹಾಸದಲ್ಲೊಂದು ಮೈಲುಗಲ್ಲು. ಸತತ 18 ವರ್ಷಗಳಿಂದ ನಂಬರ್ ಒನ್ ಪಟ್ಟ ಕಾಯ್ದುಕೊಂಡಿರುವ ಚಿತ್ರಲೋಕ ವೀರೇಶ್, ಎರಡು ಬಾರಿ ಲಿಮ್ಕಾ ದಾಖಲೆ ಗೌರವಕ್ಕೂ ಪಾತ್ರರಾಗಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರೂ ಆಗಿರುವ ವೀರೇಶ್, ತಮ್ಮ ಪ್ರಕಾಶನದ ಟಚ್ ಸ್ಕ್ರೀನ್ ಪುಸ್ತಕಕ್ಕೆ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸದಾ ಹೊಸ ತಂತ್ರಜ್ಞಾನ ಪರಿಚಯಿಸುವವರಲ್ಲಿ ವೀರೇಶ್ ಮುಂಚೂಣಿಯಲ್ಲಿರುವವರು. ಚಿತ್ರ ನಿರ್ಮಾಪಕರು ಕೂಡಾ ಹೌದು.

ಹೀಗೆ ಹಲವು ರಂಗಗಳಲ್ಲಿ ಸಾಧನೆ ಮೆರೆದಿರುವ, ಇಂದಿಗೂ ಅದೇ ಉತ್ಸಾಹ ಕಾಯ್ದುಕೊಂಡಿರುವ ವೀರೇಶ್ ಅವರಿಗೆ ಈಗ ಮಾಧ್ಯಮ ಅಕಾಡೆಮಿ ಗೌರವದ ಪುರಸ್ಕಾರ. ಚಲನಚಿತ್ರ ರಂಗದ ಕುರಿತ ವರದಿಗಾರಿಕೆ, ಸೇವೆಗಾಗಿಯೇ ಈ ಗೌರವ ಸಿಕ್ಕಿದೆ. ಚಿತ್ರಲೋಕಕ್ಕೆ ಸಂಭ್ರಮಿಸಲು ಕಾರಣವಿದೆ. ಸಂಭ್ರಮಿಸೋಣ.

Related Articles :-

Chitraloka Editor Gets Media Academy Award

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery