` ರಿಯಲ್ ಭೂತಬಂಗಲೆಯಲ್ಲಿ ರೀಲ್ ಭೂತ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
mantram was shot in real ghost house
Mantram Movie Image

ಮಂತ್ರಂ. ಕನ್ನಡದ ಹೊಸ ಹಾರರ್ ಸಿನಿಮಾ. ಇದೇ ವಾರ ತೆರೆಗೆ ಬರುತ್ತಿರುವ ಚಿತ್ರ. ಈ ಹಾರರ್ ಸಿನಿಮದಲ್ಲೊಂದು ಹಾರರ್ ಕಥೆಯಿದೆ. ಏನು ಗೊತ್ತಾ..? ಈ ಚಿತ್ರದ ಶೂಟಿಂಗ್ ನಡೆದಿರುವುದು ರಾಯಚೂರಿನ ದೌಲತ್‍ಮಹಲ್‍ನಲ್ಲಿ.

ಅದು ಇಂದು ನಿನ್ನೆಯದಲ್ಲ. ಸುಮಾರು 250 ವರ್ಷ ಹಳೆಯ ಬಂಗಲೆ. ಆ ಬಂಗೆಲೆಯೇ ದೆವ್ವದ ಮನೆಯಂತೆ. ಅದು ಖಾಜಾಗೌಡರ ಬಂಗಲೆ. ಆ ಬಂಗಲೆಯಲ್ಲಿ 50 ಕೋಣೆಗಳಿವೆ. 100 ಕಿಟಕಿಗಳೂ, 50 ಬಾಗಿಲುಗಳೂ ಇವೆ. ಕತ್ತಲಾದರೆ,ಒಬ್ಬರೇ ಓಡಾಡೋಕೆ ಭಯವಾಗುವಂತಿದೆ.

ಚಿತ್ರೀಕರಣ ಮಾಡುವಾಗ ತೊಂದರೆಗಳಾಗಿರುವುದು ನಿಜ ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ಸಜ್ಜನ್. ನಿರ್ಮಾಪಕ ಅಮರ್ ಚೌಧರಿಯವರಿಗೆ ಇದು ಮೊದಲ ಸಿನಿಮಾ. ನನ್ನ ಮೊದಲ ಸಿನಿಮಾನೇ ಸಿಕ್ಕಾಪಟ್ಟೆ ಹಾರರ್ ಆಗಿರಬೇಕು ಎಂದು ಬಯಸಿದ್ದೆ, ಸಿನಿಮಾ ಹಾಗೆಯೇ ಬಂದಿದೆ ಎಂಬ ಖುಷಿಯಲ್ಲಿದ್ದಾರೆ ನಿರ್ಮಾಪಕ ಚೌಧರಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery