ನಿರ್ದೇಶಕ ಹರ್ಷ ಅವರಿಗೂ, ಆಂಜನೇಯನಿಗೂ ಶ್ರೀರಾಮ-ಆಂಜನೇಯರಂತದ್ದೇ ಸಂಬಂಧ. ಅವರ ಸಿನಿಮಾಗಳ ಟೈಟಲ್‍ಗಳೆಲ್ಲ ಆಂಜನೇಯನ ಹೆಸರಿನವೇ. ಭಜರಂಗಿ, ವಜ್ರಕಾಯ, ಮಾರುತಿ 800 ಹಾಗೂ ಈಗ ರಿಲೀಸ್ ಆಗಬೇಕಿರುವ ಅಂಜನೀಪುತ್ರ ಎಲ್ಲವೂ ಆಂಜನೇಯನ ಇನ್ನೊಂದು ಹೆಸರೇ ಆಗಿರುವುದು ವಿಶೇಷ. ಶಿವರಾಜ್ ಕುಮಾರ್ ಜೊತೆಗಿನ ಸೆಟ್ಟೇರಬೇಕಿರುವ ಚಿತ್ರ ಮೈ ನೇಮ್ ಈಸ್ ಅಂಜಿಯಲ್ಲೂ ಆಂಜನೇಯನಿದ್ದಾನೆ.
ಅಂಜನೀಪುತ್ರದ ನಂತರ ನಿಖಿಲ್ ಅವರ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನುವುದನ್ನು ಇದೇ ಚಿತ್ರಲೋಕದಲ್ಲಿ ಓದಿದ್ದಿರಿ. ಈಗ ನಿಖಿಲ್ ನಿರ್ದೇಶನದ ಹೊಸ ಚಿತ್ರದ ಹೆಸರು ಗೊತ್ತಾಗಿದೆ. ಸೀತಾರಾಮ ಕಲ್ಯಾಣ.
ಅಲ್ಲಿಗೆ ಸತತ 4 ಚಿತ್ರಗಳ ನಂತರ ಹರ್ಷ, ಆಂಜನೇಯನನ್ನು ಬಿಟ್ಟು ಕೊಟ್ಟಿದ್ದಾರೆ. ಆದರೆ, ಈ ಬಾರಿ ಅವರು ಅಂಜನೇಯನ ದೇವರುಗಳಾದ ಶ್ರೀರಾಮ-ಸೀತೆಯನ್ನೇ ಚಿತ್ರದ ಟೈಟಲ್‍ನಲ್ಲಿ ತಂದಿರುವುದು ವಿಶೇಷ.
ಚೆನ್ನಾಂಬಿಕ ಫಿಲಂಸ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಹಳ್ಳಿಯ ಸೊಗಡಿನ ಕಥೆ ಇದೆಯಂತೆ. ನಿಖಿಲ್‍ಗೆ ತಂದೆಯಾಗಿ ಶರತ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದು, ಉಳಿದ ತಾರಾಬಳಗದ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಚಿತ್ರಕ್ಕೆ ಇದೇ ಶುಕ್ರವಾಗ ನ.29ರಂದು ಮುಹೂರ್ತ ನಡೆಯಲಿದೆ. ಅದು ನಿಖಿಲ್‍ಗೆ 3ನೇ ಚಿತ್ರವಾಗಲಿದೆ ಎನ್ನುವುದು ಇನ್ನೊಂದು ವಿಶೇಷ.
Related Articles :-