ಮಂತ್ರಂ, ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರ. ಚಿತ್ರದ ಟ್ರೇಲರ್ ನೋಡಿಯೇ ಬೆಚ್ಚಿ ಬಿದ್ದವರಿಗೆ ಇನ್ನೊಂದು ಸಂಗತಿ ಗೊತ್ತಿರಲಿ. ಇದು ರೀಲ್ ಸಿನಿಮಾ ಆದರೂ, ಕಥೆ ರಿಯಲ್. ಇದು ಕಾಲ್ಪನಿಕ ಕಥೆಯಲ್ಲ. ಸತ್ಯ ಘಟನೆ ಆಧರಿಸಿ ತೆಗೆದಿರುವ ಚಿತ್ರ.
ಚಿತ್ರದ ಬಹುಪಾಲು ಶೂಟಿಂಗ್ ನಡೆದಿರೋದು ರಾಯಚೂರಿನ ದೌಲತ್ ಮಹಲ್‍ನಲ್ಲಿ. ಸುಮಾರು 300 ವರ್ಷಗಳ ಇತಿಹಾಸವಿರುವ ಬಂಗಲೆಯಲ್ಲಿನ ರಹಸ್ಯ ಭೇದಿಸುವ ಕಥೆಯೇ ಮಂತ್ರಂ.
ಚಿತ್ರದಲ್ಲಿ 3 ತ್ರಿಶೂಲಗಳಿಗೆ. 3 ತ್ರಿಶೂಲಗಳಿಗೂ ಒಂದೊಂದು ಅರ್ಥವಿದೆ. ಅದನ್ನು ತಿಳಿದುಕೊಳ್ಳೋಕೆ ನೀವು ಸಿನಿಮಾ ನೋಡಲೇಬೇಕು. ಎಸ್.ಎಸ್. ಸಜ್ಜನ್ ನಿರ್ದೇಶನದ ಚಿತ್ರಕ್ಕೆ, ಅಮರ್ ಚೌಧರಿ ನಿರ್ಮಾಪಕರು. ಮೂಲತಃ ಚಿನ್ನದ ವ್ಯಾಪಾರಿಗಳಾದ ಅವರಿಗೆ ಇಷ್ಟವಾಗಿದ್ದು ಸಜ್ಜನ್ ಅವರ ಮೇಕಿಂಗ್ ಸ್ಟೈಲ್.
ಚಿತ್ರದ ನಾಯಕ ಮಣಿಶೆಟ್ಟಿ. ಚಿತ್ರದ ನಾಯಕಿ ಪಲ್ಲವಿ ನಾಗರಾಜ್. ನೋಡಲು ಸುಂದರಿಯಾದರೂ, ಚಿತ್ರದ ಟ್ರೇಲರ್‍ನಲ್ಲಂತೂ ಭಯಾನಕವಾಗಿ ಕಾಣುತ್ತಾರೆ. ಧ್ವನಿಯನ್ನೂ ಮಾರ್ಪಾಡು ಮಾಡಿಕೊಂಡಿರುವ ಪಲ್ಲವಿಗೆ ಮಂತ್ರಂ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ.