ಜನ ಮೆಚ್ಚಿದರೆ ಬೆಳವಣಿಗೆ, ಮೆರೆಸಿದರೆ ಮೆರವಣಿಗೆ ಅಂಜನೀಪುತ್ರದಲ್ಲಿ ಪುನೀತ್‍ಗೆ ಇಂಥಾದ್ದೊಂದು ಡೈಲಾಗ್ ಇದೆ. ರಾಜಕುಮಾರನ ನಂತರ ಬರುತ್ತಿರುವ ಅಂಜನೀಪುತ್ರ ಸೃಷ್ಟಿಸಿರುವ ಕುತೂಹಲ ಅಷ್ಟಿಷ್ಟಲ್ಲ. ಆ ಕುತೂಹಲವೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.
ಚಿತ್ರದ ಹಾಡುಗಳ ಜೊತೆ ಟ್ರೇಲರ್‍ನ್ನೂ ಬಿಡುಗಡೆ ಮಾಡಲಾಗಿದ್ದು, ಆನ್‍ಲೈನ್‍ನಲ್ಲಿ ಟ್ರೇಲರ್‍ನ್ನು ಅಭಿಮಾನಿಗಳು ಮೆರೆಸುತ್ತಿದ್ದಾರೆ. ಯೂಟ್ಯೂಬ್ ಒಂದರಲ್ಲೇ ಒಂದೇ ದಿನದಲ್ಲಿ 8 ಲಕ್ಷಕ್ಕೂ ಹೆಚ್ಚು ಜನ ನೋಡಿರುವುದು ಚಿತ್ರದ ಹೆಗ್ಗಳಿಕೆ. ಫೇಸ್‍ಬುಕ್, ಟ್ವಿಟರ್, ಇನ್‍ಸ್ಟಾಗ್ರಾಮ್‍ಗಳಲ್ಲೂ ಅಂಜನೀಪುತ್ರ ಅಬ್ಬರಿಸುತ್ತಿದ್ದಾನೆ.
ಟ್ರೇಲರ್‍ನಲ್ಲಿ ರಮ್ಯಕೃಷ್ಣ ಅವರ ಡೈಲಾಗ್ ಡೆಲಿವರಿ, ಶಿವಗಾಮಿಯ ಖದರ್‍ನ್ನೇ ನೆನಪಿಸುವಂತಿದೆ.
ಪುನೀತ್ ಮಾಲೀಕತ್ವದ ಪಿಆರ್‍ಕೆ ಬ್ಯಾನರ್‍ನಲ್ಲಿ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಆಡಿಯೋ ಸಿಡಿಯನ್ನು ಆಂಜನೇಯನ ಪುಟ್ಟ ಮೂರ್ತಿಯೇ ಹೊತ್ತು ತಂದಿದ್ದು ವಿಶೇಷ. ಎಂ.ಎನ್. ಕುಮಾರ್ ನಿರ್ಮಾಣದ ಚಿತ್ರಕ್ಕೆ ಹರ್ಷ ನಿರ್ದೇಶಕ.
ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಪುನೀತ್ ಕುಟುಂಬದವರೆಲ್ಲ ಹಾಜರಿದ್ದು ಶುಭ ಹಾರೈಸಿದ್ದು ವಿಶೇಷವಾಗಿತ್ತು. ಹಿರಿಯ ನಿರ್ದೇಶಕ ಭಗವಾನ್ ಹಾಗೂ ಹಿರಿಯ ಸಂಗೀತ ನಿರ್ದೇಶಕ ರಾಜನ್ ಕೂಡಾ ಅಪ್ಪು ಹೊಸ ಸಾಹಸಕ್ಕೆ ಶುಭ ಕೋರಿದರು.