ವಿನೋದ್ ಪ್ರಭಾಕರ್, ಆ್ಯಕ್ಷನ್ ಚಿತ್ರ ಪ್ರಿಯರ ಮೆಚ್ಚಿನ ನಟ. ಈಗ ರಗಡ್ ಚಿತ್ರದಲ್ಲಿ ನಟಿಸುತ್ತಿರುವ ವಿನೋದ್ ಪ್ರಭಾಕರ್ ಹೇಗೆಲ್ಲ ತಯಾರಿ ಮಾಡಿಕೊಳ್ತಿದ್ದಾರೆ ಗೊತ್ತಾ...?
ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಸಿಕೊಳ್ಳುತ್ತಿದ್ದಾರೆ. ಅರೆ, ಫಿಟ್ ಆಗಿದ್ದಾರಲ್ಲ. ಸಿಕ್ಸ್ ಪ್ಯಾಕ್ ಏಕೆ ಅನ್ನಬೇಡಿ. ಪ್ರತಿದಿನ ಜಿಮ್ನಲ್ಲಿ ಬೆವರು ಹರಿಸಿದ ತಕ್ಷಣ ಸಿಕ್ಸ್ಪ್ಯಾಕ್ ಬರಲ್ಲ. ಈಗ ವಿನೋದ್ ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಚಿತ್ರದಲ್ಲಿ ನೀರಿನಲ್ಲಿರುವ ದೃಶ್ಯ ಇದೆಯಂತೆ. ಡೈರೆಕ್ಟರ್ ಗ್ರಾಫಿಕ್ಸ್ನಲ್ಲಿ ಮಾಡೋಣ ಎಂದರೂ ಕೇಳದರೆ ಅಂಡರ್ ವಾಟರ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ ವಿನೋದ್.
ವಿನೋದ್ಗೆ ಈಜು ಸರಿಯಾಗಿ ಬರೋದಿಲ್ಲ. ಈಗ ಈಜನ್ನೂ ಸೀರಿಯಸ್ಸಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಎಷ್ಟೆಂದರೂ ಮರಿ ಟೈಗರ್. ಟೈಗರ್ ಪ್ರಭಾಕರ್ ಕೂಡಾ ಅಷ್ಟೆ.. ತಮ್ಮ ಚಿತ್ರದಲ್ಲಿ ಏನೇ ಕಷ್ಟವಾದರೂ ಸ್ಟಂಟ್ಗಳನ್ನು ಸ್ವತಃ ಮಾಡುತ್ತಿದ್ದರು. ಡ್ಯೂಪ್ಗಳನ್ನು ಬಳಸುತ್ತಿರಲಿಲ್ಲ. ಈಗ ಮಗನ ಸರದಿ.