ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಷನ್‍ನ ಮೊದಲ ಸಿನಿಮಾ ಅಂಜನೀಪುತ್ರ. ಜೊತೆಗೆ ರಶ್ಮಿಕಾ ಮಂದಣ್ಣ ಎಂಬ ಮುಂಜಾನೆಯ ಚೆಲುವೆ. ರಮ್ಯಕೃಷ್ಣ, ರವಿಶಂಕರ್, ಸಾಧುಕೋಕಿಲ, ಶೋಭರಾಜ್, ಚಿಕ್ಕಣ್ಣ, ವಿ.ಮನೋಹರ್ ಮೊದಲಾದ ಪ್ರತಿಭೆಗಳ ಮಿಲನ. ರವಿ ಬಸ್ರೂರ್ ಸಂಗೀತ ಇರೋ ಚಿತ್ರದ ಹವಾ ಜೋರಾಗಿಯೇ ಇದೆ.
ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಸೀಕ್ರೆಟ್ ಕಾಪಾಡಿಕೊಂಡಿರುವ ಚಿತ್ರತಂಡ, ನೇರವಾಗಿ ಆಡಿಯೋ ರಿಲೀಸ್ ಮೂಲಕ ಹೊರಗೆ ಕಾಣಿಸಿಕೊಳ್ತಾ ಇದೆ. ನವೆಂಬರ್ 24ಕ್ಕೆ ಅಂಜನೀಪುತ್ರದ ಆಡಿಯೋ ರಿಲೀಸ್. ಚಿತ್ರದ ಆಡಿಯೋ ಪುನೀತ್ ರಾಜ್‍ಕುಮಾರ್ ಸ್ವಂತ ಆಡಿಯೋ ಕಂಪೆನಿ ಬ್ಯಾನರ್‍ನಿಂದ ಹೊರಬರುತ್ತಿದೆ. ಸಹಜವಾಗಿಯೇ ಚಿತ್ರದ ಮೇಲೆ ನಿರೀಕ್ಷೆಗಳು ಸಿಕ್ಕಾಪಟ್ಟೆ ಇವೆ.