` ಮನಬಿಚ್ಚಿ ಮಾತನಾಡಿದ್ದಾರೆ ಅಂಬರೀಷ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ambareesh's candid conversation
Ambareesh Image

ಅಂಬರೀಷ್ ಮಾತಿನ ಲಹರಿಗೆ ಬೀಳೋದು ಅಪರೂಪ. ಕೇಳಿದ್ದಕ್ಕೆಲ್ಲ ಉತ್ತರ ಕೊಡೋದು ಅಂಬಿ ಜಾಯಮಾನವೇ ಅಲ್ಲ. ಆದರೆ, ಅವರು ಮಾತನಾಡೋಕೆ ನಿಂತರೆ, ಅದನ್ನು ಕೇಳಿಸಿಕೊಳ್ಳಬೇಕು. ಅಷ್ಟೆ. ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದರೆ, ಸಿಟ್ಟಿಗೆದ್ದು ಬಯ್ಯೋದು ಅಂಬಿ ಸ್ಟೈಲ್. ಅಂಬಿ ಬೈದರೂ ಪತ್ರಕರ್ತರು ಬೇಜಾರು ಮಾಡಿಕೊಳ್ಳೋದಿಲ್ಲ. ನಕ್ಕು ಸುಮ್ಮನಾಗ್ತಾರೆ. ಅದು ಅಂಬರೀಷ್ ಪರ್ಸನಾಲಿಟಿ. ಅಂತ ಅಂಬಿ.. ಸುಮ್ಮನೆ ಒಂದಿಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಪಾಲಿಟಿಕ್ಸು.. ಟಿಕೆಟ್ಟು..

ರಾಜಕೀಯದಲ್ಲೇನಿದೇರಿ.. ಈಗ ಒಂದಷ್ಟು ರೆಸ್ಟ್ ಬೇಕು. ರಾಜಕಾರಣ ನೀವೇ ಮಾಡಿಕೊಳ್ಳಿ ಅಂಥಾ ಪಕ್ಷದವರಿಗೆ ಹೇಳಿಬಿಟ್ಟಿದ್ದೇನೆ. ಇನ್ನೂ ಟೈಮ್ ಇದೆ. ಹೈಕಮಾಂಡ್ ಎಲ್ಲಿಂದ ಟಿಕೆಟ್ ಕೊಡುತ್ತೋ..ಅಲ್ಲಿ ನಿಲ್ತೇನೆ. ಅಷ್ಟೆ.

ಅಂಬಿ ನಿಂಗೆ ವಯಸ್ಸಾಯ್ತೋ..

ಸದ್ಯಕ್ಕೆ ಗಡ್ಡ ಬಿಟ್ಟಿರೋದೇ ಈ ಚಿತ್ರಕ್ಕೆ. ಅದು ಶೂಟಿಂಗ್ ಆಗುವವರೆಗೆ ಗಡ್ಡ ತೆಗೆಯಲ್ಲ. ಚಿತ್ರವನ್ನೇನೋ ಒಪ್ಪಿಕೊಂಡಿದ್ದೇನೆ. ನಿರ್ದೇಶಕ ಹೊಸಬ. ಮಾತನಾಡೋಕೂ ಹೆದರಿಕೊಳ್ತಾನೆ. ನಿಂತುಕೊಂಡೇ ಮಾತನಾಡ್ತಾನೆ. ನೀನು ಡೈರೆಕ್ಟರ್. ನಾನು ನಟ, ನಿರ್ದೇಶಕರಿಗೆ ಭಯ ಇರಬಾರದು ಎಂದರೂ ಕೇಳಲ್ಲ. ಏನೋ ಹೇಳಿದ್ದೀನಿ. ಸೆಟ್‍ಗೆ ಬಂದಾಗ ಏನ್ ಮಾಡ್ತಾನೋ.. ನೋಡಬೇಕು.

ಚಿತ್ರಕ್ಕೆ ಅಂಬಿಕಾನೋ.. ಸುಹಾಸಿನಿನೋ ಗೊತ್ತಿಲ್ಲ. ನೊಡಬೇಕು. ಯಾರನ್ನು ಹಾಕಿದ್ರೂ ನಂಗೇನೂ ನಷ್ಟ ಇಲ್ಲ.

ಕುರುಕ್ಷೇತ್ರದ ಭೀಷ್ಮ..

ಮುನಿರತ್ನ ಹಾಗೂ ನಾಗಣ್ಣ ಬಂದ್ರು. ಭೀಷ್ಮನ ಪಾತ್ರ ನೀವೇ ಮಾಡಬೇಕು ಅಂದ್ರು. ಉದ್ದನೆ ಗಡ್ಡ, ಮೀಸೆ ಎರಡೂ ಹಾಕ್ಕೊಂಡ್ರೇ ನೀನೇ ಭೀಷ್ಮನ ಪಾತ್ರ ಮಾಡಬಹುದು ಎಂದಿದ್ದೆ. ನೀವೇ ಬೇಕು ಅಂದ್ರು. ಹೋಗಿ ಮಾಡಿ ಬಂದೆ. ಒಳ್ಳೆ ಅನುಭವ. ಏನ್ ಮಾಡಿ ಏನ್ ಪ್ರಯೋಜನ. ತೆರೆ ಮೇಲೆ ಬಂದಾಗ, ನಾನ್ಯಾರು ಅಂಥಾ ನನಗೇ ಗೊತ್ತಾಗದೆ ಇದ್ದರೆ ಹೇಗೆ..? ನೋಡೋಣ. ಒಳ್ಳೆ ಸಿನಿಮಾ ಮಾಡಿದ ಖುಷಿ ಇದೆ.

 

#

Edakallu GuddadaMele Movie Gallery

Rightbanner02_backasura_inside

Rajaratha Movie Gallery