` ಫೋನ್ ಕಾಲ್ ರಿಸೀವ್ ಮಾಡಿದ್ರೆ, ಆತ್ಮ ಪ್ರವೇಶ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
hilton house moive poster
Hilton House Movie Image

ಇದುವರೆಗೂ ದೆವ್ವಗಳೆಂದರೆ, ಕಲ್ಪನೆಯೇ ಬೇರೆಯಿತ್ತು. ಬಿಳಿ ಬಟ್ಟೆ ಹಾಕಿಕೊಂಡು ಹಾಡು ಹೇಳಿಕೊಂಡು ಹೋಗುವ ಹೆಣ್ಣು ದೆವ್ವ, ಬೇರೆಯವರ ಮೈಮೇಲೆ ಬಂದು ಕಿರುಚಾಡುವ ದೆವ್ವ, ಸಮಾಧಿಯಿಂದ ವಿಚಿತ್ರವಾಗಿ ಎದ್ದು ನಿಲ್ಲುವ ಹೆಣದ ದೆವ್ವ, ಗಾಳಿಯ ರೂಪದಲ್ಲಿ ಓಡಾಡುವ ದೆವ್ವ, ಕಾಮಿಡಿ ಮಾಡುವ ದೆವ್ವ.. ಹೀಗೆ ತರಹೇವಾರಿ ದೆವ್ವಗಳನ್ನು ನೀವೆಲ್ಲ ನೋಡಿರ್ತೀರಿ. ಆದರೆ, ಎಲ್ಲಾದರೂ ಡಿಜಿಟಲ್ ದೆವ್ವ ನೋಡಿದ್ದೀರಾ..? ಡಿಜಿಟಲ್ ದೆವ್ವ ನೋಡಬೇಕೆಂದರೆ, ಹಿಲ್ಟನ್ ಹೌಸ್‍ಗೆ ನುಗ್ಗಿ.

`#9 ಹಿಲ್ಟನ್ ಹೌಸ್' ಚಿತ್ರದಲ್ಲಿರೋದು ಡಿಜಿಟಲ್ ದೆವ್ವ. ಹೇಗೆ..? ಆ ಸಸ್ಪೆನ್ಸ್‍ಗೆ ಉತ್ತರ ಸಿಕ್ಕೋದು ಥಿಯೇಟರ್‍ನಲ್ಲಿ ಮಾತ್ರ. ತೆಲುಗಿನಲ್ಲಿ `ಮಲ್ಲಿ ವಚ್ಚಿಂಡ..?' ಹಾಗೂ ಮಲಯಾಳಂನಲ್ಲಿ ಕೆಕ್ಕಮಲೈ ಕೆಕ್ಕುಮ್ ಹೆಸರಲ್ಲಿ ಬರುತ್ತಿರುವ ಚಿತ್ರ, ಕನ್ನಡದಲ್ಲಿ #9 ಹಿಲ್ಟನ್ ಹೌಸ್ ಹೆಸರಲ್ಲಿ ಬರ್ತಾ ಇದೆ. ಒಂದ್ಸಲ ನಗು, ಪ್ರಾಣ ಹೋಗುವ ಮುನ್ನ ಎನ್ನುವುದು ಚಿತ್ರಕ್ಕೆ ಟ್ಯಾಗ್‍ಲೈನ್.

ಚಿತ್ರದಲ್ಲಿ ದೆವ್ವ, ಮೊಬೈಲ್‍ನಿಂದ ಮೊಬೈಲ್‍ಗೆ ಆವರಿಸಿಕೊಳ್ಳುತ್ತದಂತೆ. ಕರೆ ಸ್ವೀಕರಿಸಿದರೆ ಸಾಕು, ದೆವ್ವ ಅಟ್ಯಾಕ್ ಆಗುತ್ತೆ. ಈ ಕಾನ್ಸೆಪ್ಟ್‍ನಲ್ಲಿ ತಯಾರಾಗಿರುವ ಸಿನಿಮಾದಲ್ಲಿ ಹೊಸತನವಂತೂ ಇದೆ. 

#

Edakallu GuddadaMele Movie Gallery

Rightbanner02_backasura_inside

Rajaratha Movie Gallery