` ತಿಥಿ ಪೂಜಾಗೆ ಬಸವ ಗುದ್ದಿದಾಗ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pooja thithi fame
Thithi Fame Actress Pooja

ತಿಥಿ ಚಿತ್ರದ ಮೂಲಕ ಗಮನ ಸೆಳೆದ ಕಲಾವಿದೆ ಪೂಜಾ, ಎಡಪಕ್ಕೆಗೆ ಏಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದ ಘಟನೆ ನಿಧಾನವಾಗಿ ಹೊರಬಿದ್ದಿದೆ. ಪೂಜಾ, ಈ ರೀತಿ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಲು ಕಾರಣವಾಗಿರೋದು ಕೋಲೆ ಬಸವ. ಮೂಕ ಹಕ್ಕಿ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ವೇಳೆ ಕೋಲೆ ಬಸವನ ಜೊತೆ ಸೀನ್ ಇತ್ತು. ಇನ್ನೊಂದು ಐದು ನಿಮಿಷ ಶೂಟಿಂಗ್ ಆಗಿಬಿಟ್ಟಿದ್ದರೆ, ಚಿತ್ರಕ್ಕೆ ಕುಂಭಳಕಾಯಿ ಒಡೆಯಬೇಕಿತ್ತು. ಅಷ್ಟರಲ್ಲಿ ಈ ಅನಾಹುತ ಸಂಭವಿಸಿಬಿಟ್ಟಿದೆ.

ಒಂದೊಳ್ಳೆ ಸಿನಿಮಾ ಮಾಡುವಾಗ ಇಂಥವೆಲ್ಲ ಆಗೋದು ಸಹಜ ಎನ್ನುತ್ತಾರೆ ಪೂಜಾ. ಚಿತ್ರತಂಡದವರೆಲ್ಲ ಪೂಜಾ ಅವರನ್ನು ಚೆನ್ನಾಗಿ ಆರೈಕೆ ಮಾಡಿದ್ದಾರೆ. ಪೂಜಾ ಚೇತರಿಸಿಕೊಳ್ಳುತ್ತಿದ್ದಾರೆ.