ಶ್ರೀಕಂಠ ಚಿತ್ರದ ಮೂಲಕ ಶಿವರಾಜ್ ಕುಮಾರ್ ಅವರನ್ನು ವಿಭಿನ್ನ ಗೆಟಪ್‍ನಲ್ಲಿ ತೋರಿಸಿದ್ದ ಮಂಜು ಸ್ವರಾಜ್, ಈಗ ಶರಣ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಮಾಸ್ ಲೀಡರ್ ನಂತರ ತರುಣ್ ಶಿವಪ್ಪ ನಿರ್ಮಿಸುತ್ತಿರುವ ಚಿತ್ರಕ್ಕೆ ಶರಣ್ ಹೀರೋ. ಮಂಜು ಸ್ವರಾಜ್ ನಿರ್ದೇಶಕ.
ಚಿತ್ರಕ್ಕೆ ಕಥೆ ಸಿದ್ಧವಾಗುತ್ತಿದ್ದು, ತರುಣ್ ಸುಧೀರ್ ಆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಶರಣ್ ಅಭಿನಯದ ರ್ಯಾಂಬೋ, ವಿಕ್ಟರಿ, ಅಧ್ಯಕ್ಷ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದ ತರುಣ್ ಸುಧೀರ್, ಮತ್ತೊಮ್ಮೆ ಶರಣ್ ಚಿತ್ರಕ್ಕೆ ಜೊತೆಯಾಗಿದ್ದಾರೆ. ರ್ಯಾಂಬೋ 2 ಚಿತ್ರದಲ್ಲಿ ಬ್ಯುಸಿಯಾಗಿರುವ ಶರಣ್, ನಂತರ ಮಲಯಾಳಂನ `ಟು ಕಂಟ್ರೀಸ್' ಚಿತ್ರದ ರೀಮೇಕ್‍ನಲ್ಲಿ ನಟಿಸಲಿದ್ದಾರೆ. ಅದಾದ ಮೇಲೆ ಮಂಜು ಸ್ವರಾಜ್ ನಿರ್ದೇಶನದ ಚಿತ್ರ ಶುರುವಾಗಲಿದೆ.