ಸ್ಯಾಂಡಲ್‍ವುಡ್‍ನ ನಟಿಯರೆಲ್ಲ ತಾವು ಧರಿಸಿದ್ದ ಬಟ್ಟೆಗಳನ್ನು ಹರಾಜು ಮಾಡಲು ನಿರ್ಧರಿಸಿದ್ದನ್ನು ಓದಿದ್ದಿರಲ್ಲ. ಸಮಾಜಸೇವೆಗಾಗಿ ಈ ಕೆಲಸಕ್ಕೆ ಕೈ ಹಾಕಿದ್ದ ನಟಿಯರ ಪ್ರಯತ್ನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಏನೆಂದರೆ, ಈ ನಟಿಯರ ಬಟ್ಟೆಗಳೆಲ್ಲ ಕೇವಲ ಒಂದೇ ಗಂಟೆಯಲ್ಲಿ ಸೇಲ್ ಆಗಿ ಹೋಗಿವೆ.
`ದಿ ವ್ಯಾನಿಟಿ ಟ್ರಂಕ್ ಸೇಲ್' ಅನ್ನೋ ಹೆಸರಲ್ಲಿ ನಡೆದ ಈ ಹಳೆಯ ಬಟ್ಟೆಗಳ ಹರಾಜಿನಲ್ಲಿ ಒಟ್ಟು 1200 ಮಂದಿ ಭಾಗವಹಿಸಿದ್ದರು. ಇದರಿಂದ ಒಂದು ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆಯಂತೆ. ಅಂದಹಾಗೆ ಇದು ಮಹಿಳೆಯರಿಂದ ಮಹಿಳೆಯರಿಗಾಗಿ ನಡೆದ ಸೇಲ್.
ಶೃತಿ ಹರಿಹರನ್, ಮೇಘನಾ ರಾಜ್, ಶ್ರದ್ಧಾ ಶ್ರೀನಾಥ್, ಮೇಘನಾ ಗಾಂವ್ಕರ್, ಸಂಯುಕ್ತಾ ಹೆಗ್ಡೆ, ಶಾನ್ವಿ ಶ್ರೀವಾತ್ಸವ್, ಸಂಯುಕ್ತಾ ಹೊರನಾಡು, ಸೋನು ಗೌಡ, ಮಾನ್ವಿತಾ ಹರೀಶ್, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ನೀತು ಶೆಟ್ಟಿ, ಸಚಿನಾ ಹೆಗ್ಗಾರ್, ಸಂಗೀತಾ ಭಟ್, ಪ್ರಜ್ಞಾ.. ಮೊದಲಾದವರು ಈ ಹರಾಜಿಗೆ ತಮ್ಮ ಬಟ್ಟೆಗಳನ್ನು ನೀಡಿದ್ದರು.