` ಬಾಲಕೃಷ್ಣ ಜೊತೆ ಹರಿಪ್ರಿಯಾ ಶೂಟಿಂಗ್ ಕಥೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
haripriya shares experience with balakrishna
Balakrishna, HariPriya Image

ಹರಿಪ್ರಿಯಾ... ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ನಿಮಿಷವೂ ಪುರುಸೊತ್ತಿಲ್ಲದಂತೆ ಸುತ್ತುತ್ತಿರುವ ನಟಿ. ಕನ್ನಡದಲ್ಲಷ್ಟೇ ಅಲ್ಲ, ತೆಲುಗಿಗೂ ಹಾರಿರುವ ಹರಿಪ್ರಿಯಾ, ಬಾಲಕೃಷ್ಣ ಜೊತೆ ನಟಿಸುತ್ತಿದ್ದಾರೆ. ಅದು ತಮಿಳಿನ ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ನಿರ್ದೇಶನದ ಚಿತ್ರ ಬೇರೆ. ಬಾಲಕೃಷ್ಣ ಅವರ 102ನೇ ಚಿತ್ರ `ಜೈ ಸಿಂಹ'ದಲ್ಲಿ ನಟಿಸುತ್ತಿರುವ ಹರಿಪ್ರಿಯಾ, ಬಾಲಕೃಷ್ಣ ಅವರ ಸರಳತೆಗೆ ಮಾರು ಹೋಗಿದ್ದಾರೆ.

ತೆಲುಗು ಚಿತ್ರರಂಗ ನನಗೆ ಹೊಸದಲ್ಲ. ಈಗ ಮತ್ತೆ ತೆಲುಗಿಗೆ ಹೋಗಿದ್ದೇನೆ. ಅದೂ ಬಾಲಕೃಷ್ಣ ಜೊತೆಗಿನ ಸಿನಿಮಾ ಮೂಲಕ. 100 ಚಿತ್ರಗಳಲ್ಲಿ ನಟಿಸಿದ್ದರೂ, ಅವರು ಸಹಕಲಾವಿದರೊಂದಿಗೆ ವರ್ತಿಸುವ ರೀತಿ ನನಗೆ ಇಷ್ಟವಾಯಿತು ಎಂದಿದ್ದಾರೆ ಹರಿಪ್ರಿಯಾ. 

ಚಿತ್ರದ ಶೂಟಿಂಗ್ ವೇಳೆ ತೆಗೆದ ಫೋಟೋಗಳನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ.

#

The Terrorist Movie Gallery

Thayige Thakka Maga Movie Gallery