` ಕನ್ನಡದಲ್ಲಿ ನಟಿಸುವ ಆಸೆ. ಆದರೆ.. - ಅಲ್ಲು ಶಿರೀಷ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
allu sirish Image
Allu Sirish At Tagaru Teaser Launch

ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅವರ ತಮ್ಮ ಅಲ್ಲು ಶಿರೀಷ್. ಈಗಾಗಲೇ ಎರಡು ಹಿಟ್ ಚಿತ್ರಗಳನ್ನು ನೀಡಿರುವ ಕಲಾವಿದ. ಮೊನ್ನೆ ಮೊನ್ನೆಯಷ್ಟೇ ಟಗರು ಚಿತ್ರದ ಆಡಿಯೋ ರಿಲೀಸ್‍ಗೆ ಬಂದಿದ್ದ ಅಲ್ಲು ಶಿರೀಷ್, ಕನ್ನಡದಲ್ಲಿ ನಟಿಸಬೇಕು ಎನ್ನುವುದು ನನ್ನ ಆಸೆ ಎಂದು ಹೇಳಿಕೊಂಡಿದ್ದಾರೆ.

ಆದರೆ, ಅವರದ್ದೊಂದು ಬೇಡಿಕೆಯಿದೆ. ನಾನು ನಟಿಸುವ ಚಿತ್ರದಲ್ಲಿ ಶಿವರಾಜ್ ಕುಮಾರ್ ಇರಬೇಕು. ಪುನೀತ್ ಕೂಡಾ ಇದ್ದರೆ ಇನ್ನೂ ಸೂಪರ್ ಎಂದು ಹೇಳಿಕೊಂಡಿದ್ದಾರೆ.

ಪಾಪ, ಶಿವಣ್ಣ ಮತ್ತು ಪುನೀತ್ ಅಭಿಮಾನಿಗಳು ಅದೆಷ್ಟೋ ವರ್ಷಗಳಿಂದ ಅಣ್ಣ-ತಮ್ಮನನ್ನು ಒಟ್ಟಿಗೇ ತೆರೆಯ ಮೇಲೆ ನೋಡುವ ಆಸೆಯಿಟ್ಟುಕೊಂಡು ಕಾಯುತ್ತಿರುವುದು ಅವರಿಗೆ ಗೊತ್ತಿಲ್ಲವೇನೋ. ಅಟ್‍ಲೀಸ್ಟ್ ಅವರ ಮೂಲಕವಾದರೂ ರಾಜ್ ಫ್ಯಾಮಿಲಿ ಅಭಿಮಾನಿಗಳ ಆಸೆ ಈಡೇರಲಿ ಬಿಡಿ.

#

Tagaru Movie Gallery

Prema Baraha Success Meet Gallery