` ಹಳೆ ಸಿನಿಮಾ ಟೈಟಲ್ ಇನ್ನು ಮುಂದೆ ಸಿಗಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
old movie titles not available
Satya Harischandra Image

ಇತ್ತೀಚೆಗಷ್ಟೇ ಸತ್ಯ ಹರಿಶ್ಚಂದ್ರ ಸಿನಿಮಾ ಬಂದಿತ್ತು. ಅದು ಅಣ್ಣಾವ್ರ ಅಭಿನಯದ ಸೂಪರ್ ಹಿಟ್ ಚಿತ್ರ ಸತ್ಯ ಹರಿಶ್ಚಂದ್ರ ಚಿತ್ರವನ್ನು ನೆನಪಿಸಿತ್ತು. ಆದರೆ, ಸಿನಿಮಾ ನೋಡಿದವರು ಅಣ್ಣಾವ್ರ ಸಿನಿಮಾ ಟೈಟಲ್‍ಗಳನ್ನು ಹೊಸ ಚಿತ್ರಗಳಿಗೆ ಕೊಡಬೇಡಿ. ಅದು ಟೈಟಲ್‍ಗೇ ಮಾಡುವ ಅವಮಾನ ಎಂದು ಫಿಲಂ ಚೇಂಬರ್‍ಗೆ ಮನವಿ ಮಾಡಿದ್ದರಂತೆ.

ಅದು ಸಹಜವೂ ಹೌದು. ಕೆಲವು ವರ್ಷಗಳ ಹಿಂದೆ ಮೈಸೂರು ಮಲ್ಲಿಗೆ ಎಂಬ ಹೆಸರಿನಲ್ಲಿ ನಿರ್ಮಾಣವಾಗುತ್ತಿದ್ದ ಚಿತ್ರವನ್ನು ಟೈಟಲ್ ಬದಲಾಯಿಸಲು ಸೂಚಿಸಲಾಗಿತ್ತು. ಕಾರಣ, ಹೊಸ ಚಿತ್ರದ ಟೈಟಲ್, ಹಳೆಯ ಚಿತ್ರದ ಮರ್ಯಾದೆಯನ್ನೇ ತೆಗೆಯುತ್ತಿತ್ತು. ಅಂತಹುವುಗಳಿಗೆಲ್ಲ ಬ್ರೇಕ್ ಹಾಕಲು ಫಿಲಂ ಚೇಂಬರ್ ನಿರ್ಧರಿಸಿದೆ.

ಹಳೆಯ ಸೂಪರ್ ಹಿಟ್ ಚಿತ್ರಗಳ ಟೈಟಲ್‍ನ್ನು ಹೊಸ ಚಿತ್ರಗಳಿಗೆ ನೀಡುವಾಗ ಕೆಲವು ಮುಂಜಾಗ್ರತೆ ತೆಗೆದುಕೊಳ್ಳಲು ಫಿಲಂ ಚೇಂಬರ್ ಚಿಂತನೆ ನಡೆಸಿದೆ. ಮಯೂರ, ಭಕ್ತ ಕುಂಭಾರ, ಬಭ್ರುವಾಹನ.. ಮೊದಲಾದ ಹೆಸರಿನ ಟೈಟಲ್‍ಗಳು ಇನ್ನುಮುಂದೆ ಅಷ್ಟು ಸುಲಭವಾಗಿ ಸಿಗದೇ ಹೋಗಬಹುದು.

Johnny Johnny Yes Papa Movie Gallery

Rightbanner02_statement_inside

Dalapathi Movie Gallery