` ಟಗರು ಟೀಸರ್‍ನಲ್ಲಿ ಖದರ್ ತೋರಿಸಿದ್ದು ಯಾರು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
tagaru teaser sets trend
Shivarajkumar In Tagaru

ಟಗರು ಚಿತ್ರದ ಟೀಸರ್ ಬಿಡುಗಡೆಯಾಗಿದ್ದಾಯ್ತು. 1 ನಿಮಿಷ 12 ಸೆಕೆಂಡ್ ಇರುವ ಈ ಟೀಸರ್ ನೂರಾರು ಕುತೂಹಲ ಹುಟ್ಟಿಸಿಬಿಟ್ಟಿದೆ. ಚಿತ್ರದ ಟೀಸರ್ ನೋಡಿದರೆ, ಈ ಚಿತ್ರದಲ್ಲೂ ಜಾಕಿ ಮಾದರಿದ ಹೆಣ್ಣು ಮಕ್ಕಳ ಮಾರಾಟ ಜಾಲದ ಕಥೆಯಿದೆಯಾ ಅನ್ನೋ ಅನುಮಾನ ಬಾರದೇ ಇರದು.

ಇನ್ನು ಸೂರಿ ಚಿತ್ರದಲ್ಲಿ ಎದ್ದು ಕಾಣುವ ತಣ್ಣನೆಯ ಕ್ರೌರ್ಯದ ಪ್ರತಿಬಿಂಬಗಳು ಈ ಚಿತ್ರದಲ್ಲೂ ಇವೆ. ಶಿವರಾಜ್ ಕುಮಾರ್ ಅವರು ಕಣ್ಣಿನಲ್ಲೇ ಆಟವಾಡಿರುವುದು ಎದ್ದು ಕಾಣುತ್ತೆ. ಇನ್ನು ಟೀಸರ್‍ನಲ್ಲಿ ಹೀರೋ ಎನಿಸುವುದು ಛಾಯಾಗ್ರಹ ಮಾಹೇನ್ ಸಿಂಹ. ಚರಣ್ ರಾಜ್ ಸಂಗೀತ, ಟೆನ್ಷನ್ ಸೃಷ್ಟಿಸುವಂತಿದೆ. ಭಾವನಾ, ಮಾನ್ವಿತಾ, ಧನಂಜಯ್, ವಸಿಷ್ಟ ಸಿಂಹ ನಟಿಸಿರುವ ಚಿತ್ರದ ಟೀಸರ್‍ನಲ್ಲಿ ಕಂಡ ಅಂಶಗಳು ಇಷ್ಟು. ಸೂರಿ ಟಗರು ಬತ್ತಳಿಕೆಯಲ್ಲಿ ಅದೇನೇನಿಟ್ಟಿದ್ದಾರೋ.. ಕುತೂಹಲ ಜಾರಿಯಲ್ಲಿದೆ.

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery