` ಸುದೀಪ್ ಬ್ಯಾಟಿಂಗ್ ಮೆಚ್ಚಿದ ಇಂಗ್ಲೆಂಡ್ ಕ್ರಿಕೆಟಿಗ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
owais shah, sudeep image
Owais Shah, Sudeep Image

ಕಿಚ್ಚ ಸುದೀಪ್ ನಟನೆಯಲ್ಲಷ್ಟೇ ಅಲ್ಲ, ಆಟದಲ್ಲೂ ಎತ್ತಿದ ಕೈ ಅನ್ನೋದು ಈಗ ಅಭಿಮಾನಿಗಳಿಗೆಲ್ಲ ಗೊತ್ತಿರುವ ವಿಚಾರ. ಅಭಿಮಾನಿಗಳಿಗೆ ಬಿಡಿ, ಸುದೀಪ್ ಹೇಗೇ ಆಡಿದರೂ ಇಷ್ಟವಾಗಿಬಿಡುತ್ತೆ. ಆದರೆ, ಕ್ರಿಕೆಟರ್‍ಗಳಿಗೆ ಇಷ್ಟವಾಗೋಕೆ ಸುದೀಪ್ ಅಪ್ಪಟ ಕ್ರಿಕೆಟಿಗರಂತೆ ಆಡಿದರಷ್ಟೆ ಸಾಧ್ಯ. ಈಗ ಅದನ್ನೂ ಸಾಧ್ಯವಾಗಿಸಿಬಿಟ್ಟಿದ್ದಾರೆ ಸುದೀಪ್.

ಇಂಗ್ಲೆಂಡ್‍ನ ಕ್ರಿಕೆಟಿಗ ಓವೈಸ್ ಶಾ, ಸುದೀಪ್ ಆಟವನ್ನು ಮೆಚ್ಚಿಕೊಂಡಿದ್ದಾರೆ. ಸುದೀಪ್ ಇತ್ತೀಚೆಗಷ್ಟೇ ಟ್ವಿಟರ್‍ನಲ್ಲಿ ತಾವು ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಅಪ್‍ಲೋಡ್ ಮಾಡಿದ್ದರು. ವಿಡಿಯೋ ನೋಡಿದ ಓವೈಸ್ ಶಾ, ಸುದೀಪ್ ಆಟವನ್ನು ಮೆಚ್ಚಿದ್ದಾರೆ.

ಹವ್ಯಾಸಿ ಕ್ರಿಕೆಟಿಗರ ಆಟ, ವೃತ್ತಿಪರ ಕ್ರಿಕೆಟಿಗರ ಮೆಚ್ಚುಗೆ ಗಳಿಸುವುದೆಂದರೆ ಸುಮ್ಮನೆ ಮಾತಲ್ಲ. ಹೀಗಾಗಿಯೇ ಓವೈಸ್ ಶಾ ಹೊಗಳಿಗೆ ಸುದೀಪ್‍ಗೂ ಖುಷಿ ಕೊಟ್ಟಿದೆ.

Sagutha Doora Doora Movie Gallery

Popcorn Monkey Tiger Movie Gallery