` ಕಾಗಿನೆಲೆ ಕನಕದಾಸರಿಗೂ, ಆರ್.ಚಂದ್ರು ಕನಕನಿಗೂ ಎತ್ತಣಿಂದೆತ್ತಣ ಸಂಬಂಧ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kanaka dasa, kanaka movie link
KanakaDasa, Kanaka Movie Image

ಒಮ್ಮೊಮ್ಮೆ ಹೀಗೆಲ್ಲ ಆಗಿಬಿಡುತ್ತೆ. ಅದರಲ್ಲೂ ಸಿನಿಮಾಗಳಲ್ಲಿ. ಈಗ ನೋಡಿ..ದುನಿಯಾ ವಿಜಯ್ ಅಭಿನಯದ ಕನಕ ಚಿತ್ರದ ಮೊದಲ ಟ್ರೇಲರ್ ಬಿಡುಗಡೆಯಾಗಿದೆ. ಹಾಗೆ ಕನಕ ಚಿತ್ರದ ಟ್ರೇಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕನಕ ಜಯಂತಿ ಬಂದುಬಿಟ್ಟಿದೆ. 

ಕನಕ ಎಂಬ ಹೆಸರು ಬಿಟ್ಟರೆ, ಕಾಗಿನೆಲೆ ಕನಕದಾಸರಿಗೂ, ಆರ್.ಚಂದ್ರು ಸೃಷ್ಟಿಯ ಕನಕನಿಗೂ ಯಾವ ಸಂಬಂಧವೂ ಇಲ್ಲ. ಕನಕದಾಸರು ಕಾಗಿನೆಲೆ ಕೇಶವನ ಭಕ್ತರಾಗಿದ್ದರೆ, ಚಂದ್ರು ಅವರ ಕನಕ ಡಾ.ರಾಜ್ ಭಕ್ತ.

ಕನಕದಾಸರೆಂದರೆ, ಕನ್ನಡಿಗರ ಕಣ್ಣ ಮುಂದೆ ಬಂದು ನಿಲ್ಲೋದು ಡಾ.ರಾಜ್ ಚಿತ್ರ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಕನಕದಾಸರ ಪಾತ್ರದಲ್ಲಿ ಡಾ.ರಾಜ್ ಪರಕಾಯ ಪ್ರವೇಶ ಮಾಡಿ ನಟಿಸಿದ್ದರು. ಈಗ ಬರುತ್ತಿರುವ ಕನಕ ಚಿತ್ರದಲ್ಲಿ ಕನಕ ಪಾತ್ರಧಾರಿ ದುನಿಯಾ ವಿಜಿ, ಡಾ.ರಾಜ್ ಭಕ್ತ.

ಇಷ್ಟೆಲ್ಲ ಸಂಭ್ರಮದ ಮಧ್ಯೆ ಕನಕ ಜಯಂತಿ. ನಾಡಿನ ಸಮಸ್ತ ಜನತೆಗೆ ಕನಕ ಜಯಂತಿಯ ಶುಭಾಶಯಗಳು.

#

Tagaru Movie Gallery

Prema Baraha Success Meet Gallery