ಇದೇ ನವೆಂಬರ್ 7 ಬಂತೆಂದರೆ, ಮಾಸ್ತಿಗುಡಿ ದುರಂತಕ್ಕೆ 1 ವರ್ಷ. ಸಿನಿಮಾ ಶೂಟಿಂಗ್ ವೇಳೆ ದುರಂತಗಳಿಗೇನೂ ಬರವಿಲ್ಲ. ಅಪಘಾತಗಳಿಗಂತೂ ಕೊರತೆಯೇ ಇಲ್ಲ. ಈಗ ಅಂಥಾದ್ದೇ ಮತ್ತೊಂದು ಅಪಘಾತ ಸಂಭವಿಸಿದೆ. ‘ಐಸ್ ಮಹಲ್’ ಚಿತ್ರದ ಚಿತ್ರೀಕರಣದ ವೇಳೆ ಇಂಥಾದ್ದೊಂದು ಅಪಘಾತ ಸಂಭವಿಸಿದೆ.
Duniya Vijay Safe - Fatal Accident During Mastigudi Shooting
ನಾಯಕಿಯ ಎಂಟ್ರಿ ಸೀನ್ ಶೂಟಿಂಗ್ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಚಿಕ್ಕಮಗಳೂರಿನ ಕಡೂರಿನ ವಗರೆಹಳ್ಳಿಯಲ್ಲಿ ಘಟನೆ ನಡೆದಿದ್ದು, ಇದು ಐಸ್ ಮಹಲ್ ಚಿತ್ರದ ಕೊನೆ ದಿನದ ಶೂಟಿಂಗ್ ಆಗಿತ್ತು. ಟ್ರ್ಯಾಕ್ಟರ್ ಓಡಿಸುತ್ತಿದ್ದ ಚಾಲಕ ಕೃಷ್ಣ, ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಕೃಷ್ಣ, ಐಸ್ಮಹಲ್ ಚಿತ್ರದ ನಾಯಕ ಕಿಶೋರ್ ಅವರ ಸಹೋದರ ಎನ್ನುವುದು ವಿಶೇಷ.
ಐಸ್ ಮಹಲ್ ಚಿತ್ರದ ಕೊನೆ ದಿನ ಶೂಟಿಂಗ್ ನಡೆಯುತ್ತಿತ್ತು. ಸದ್ಯಕ್ಕೆ ಕೃಷ್ಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Also See
Accidents During Shooting not Uncommon – But Mastigudi Is Negligence - KM Veeresh Writes
Duniya Vijay Safe - Fatal Accident During Mastigudi Shooting
Ananthnag Escapes Unhurt in an Accident
Anitha Bhat Lucky Escape in Accident – Exclusive