` ಒಂದು ಕೋಟಿ ಸಿಕ್ಕ ಮೇಲೆ.. ನಿಶ್ಯಬ್ಧ 2 - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nishabdha 2 movie image
Nishabdha 2

ನಿಶ್ಯಬ್ಧ 2 ಚಿತ್ರದ ಕಥೆ ಏನು..? ಅದು ವಿಷ್ಣು ಅಭಿನಯದ ನಿಶ್ಯಬ್ಧ ಚಿತ್ರದ ಮುಂದುವರಿದ ಭಾಗವಾ ಎನ್ನುವವರ ಕುತೂಹಲಕ್ಕೆ ಇಲ್ಲಿ ಉತ್ತರ ಇದೆ. ಆ ಚಿತ್ರದಲ್ಲಿ ವಿಷ್ಣು ತಮ್ಮನ ಕೊಲೆಗೆ ಸೇಡು ತೀರಿಸಿಕೊಳ್ಳುತ್ತಾರೆ. ಆ ಸೇಡಿನ ಕಥೆಯಲ್ಲಿ ಪ್ರಧಾನ ಪಾತ್ರ ವಹಿಸುವುದು ವಿಷ್ಣು ಸಾಕಿರುವ ನಾಯಿಗಳು. ತಮ್ಮನ ಪ್ರೇಯಸಿಯನ್ನು ಮಗುವಿನಂತೆ ಕಾಪಾಡುತ್ತಲೇ ಸೇಡು ತೀರಿಸಿಕೊಳ್ಳುವ ಪಾತ್ರದಲ್ಲಿ ವಿಷ್ಣು ತಣ್ಣಗೆ ನಟಿಸಿದ್ದರು. ನೋಡುತ್ತಿದ್ದವರ ಮೈ ಬೆಚ್ಚಗಾಗಿತ್ತು.

ನಿಶ್ಯಬ್ಧ 2 ಚಿತ್ರದ ಕಥೆಯೇ ಬೇರೆ. ಇಲ್ಲಿ ತಂಡವೊಂದಕ್ಕೆ ಅಚಾನಕ್ ಆಗಿ ಒಂದು ಕೋಟಿ ಸಿಗುತ್ತೆ. ಅದನ್ನು ಹಂಚಿಕೊಳ್ಳುವಾಗ ಸಮಸ್ಯೆಯಾಗುತ್ತೆ. ತಪ್ಪು ಕೆಲಸ ಮಾಡಿಸುತ್ತೆ. ನಾಯಕ, ನಾಯಕಿ, ವಿಲನ್ ಹಾಗೂ ನಾಯಿಗಳ ಜೊತೆ ಕಥೆ ಮುಂದುವರಿಯುತ್ತೆ. ಇಡೀ ಕಥೆ ಒಂದೇ ದಿನ ನಡೆಯುತ್ತೆ.

ಸಿನಿಮಾ ಥಿಯೇಟರಿನಲ್ಲಿದೆ. ನಿಶ್ಯಬ್ಧವಾಗಿ ಹೋಗಿ ನೋಡಿ.

Related Articles :-

ನಾಯಿಗಳ ಜೊತೆ ನಾಯಕನ ಸಾಹಸ

#

Tagaru Movie Gallery

Prema Baraha Success Meet Gallery