` ಶಿವಣ್ಣ ಹೊಸ ಸಿನಿಮಾ ಎಸ್‍ಆರ್‍ಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna is now srk
Shivarajkumar Image

ಶಿವರಾಜ್ ಕುಮಾರ್ ಅವರನ್ನು ಅವರ ಆತ್ಮೀಯರಲ್ಲಿ ಕೆಲವರು ಹಾಗೂ ಅಭಿಮಾನಿಗಳು ಎಸ್‍ಆರ್‍ಕೆ ಅಂತಾನೇ ಕರೆಯೋದು.  ಎಸ್‍ಆರ್‍ಕೆ ಅನ್ನೋದು ಶಿವ ರಾಜ್ ಕುಮಾರ್ ಅನ್ನೋದರ ಶಾರ್ಟ್‍ಕಟ್. ಈಗ ಅದೇ ಹೆಸರಲ್ಲಿ, ಅವರದ್ದೇ ನಾಯಕತ್ವದಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ.

ಎಸ್‍ಆರ್‍ಕೆ ಚಿತ್ರದ ನಿರ್ದೇಶಕರು ಲಕ್ಕಿ ಗೋಪಾಲ್. ಶಿವರಾಜ್ ಕುಮಾರ್ ಅವರಿಗೆ ಸೋದರಳಿಯ ಆಗಬೇಕು. ಅವರ ನಿರ್ದೇಶನದ ಮೊದಲ ಚಿತ್ರ ಎಸ್‍ಆರ್‍ಕೆ. ಚಿತ್ರದ ಮುಹೂರ್ತದಲ್ಲಿ ನಿರ್ದೇಶಕ ಲಕ್ಕಿ ಗೋಪಾಲ್, ಶಿವಣ್ಣ ಇಲ್ಲದಿದ್ದರೆ ನಾನು ವಿದ್ಯಾಭ್ಯಾಸವನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳುತ್ತಾ ಭಾವುಕರಾದರು. ನೋಡುತ್ತಿದ್ದವರ ಕಣ್ಣಲ್ಲೂ ನೀರು ತರಿಸಿದರು. 

ಅಂದಹಾಗೆ ಚಿತ್ರವನ್ನು ನಿರ್ಮಿಸುತ್ತಿರುವುದು ಶಿವರಾಜ್ ಕುಮಾರ್ ಅಭಿಮಾನಿಗಳು. ಲಕ್ಕಿ ಗೋಪಾಲ್ ಹೇಳಿದ ಕಥೆ ಇಷ್ಟವಾಗಿ, ಶಿವಣ್ಣನ ಮೇಲಿನ ಅಭಿಮಾನಕ್ಕೆ ನಿರ್ಮಾಪಕರಾಗುತ್ತಿದ್ದಾರೆ. 

 

Johnny Johnny Yes Papa Movie Gallery

Rightbanner02_statement_inside

Dalapathi Movie Gallery