` ಉಪ್ಪಿ ಸ್ಥಾಪಿಸಿದ ಪಕ್ಷ.. ಅವರದ್ದಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
uppis kpjp party
Upendra Image

ನಟ ಉಪೇಂದ್ರ ಅವರ ಪ್ರಜಾಕೀಯದ ಕಲ್ಪನೆಯೇನೋ ಅವರದ್ದೇ. ಆದರೆ, ಅವರು ಸ್ಥಾಪಿಸಿರುವ ಪಕ್ಷ ಅವರದ್ದಲ್ಲ. ಅದು ಮೂಲತಃ ಮಹೇಶ್ ಗೌಡ ಎಂಬುವವರು ಸ್ಥಾಪಿಸಿರುವ ಪಕ್ಷ. ಈಗ ಆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವುದು ಉಪೇಂದ್ರ.

ಸುಮಾರು 2 ವರ್ಷಗಳ ಹಿಂದೆ ಮಹೇಶ್ ಗೌಡ ಎಂಬುವವರು `ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ವನ್ನು ನೋಂದಾಯಿಸಿದ್ದರು.  ತಮ್ಮ ಪತ್ನಿಯನ್ನು ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಸಿದ್ದರು. ನಂತರ ಕೆಲವರ ಸಲಹೆ ಮೇರೆಗೆ ಈ ಪಕ್ಷವನ್ನು ಸ್ಥಾಪಿಸಿದ್ದರು.

ಉಪೇಂದ್ರ ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದಾರೆ ಎಂದು ಗೊತ್ತಾದ ನಂತರ, ಉಪೇಂದ್ರ ಅವರನ್ನು ಭೇಟಿಯಾಗಿ ತಮ್ಮ ಪಕ್ಷದ ಬಗ್ಗೆ ವಿವರಿಸಿದರು. ಮಹೇಶ್ ಗೌಡ ಅವರ ಆಲೋಚನೆಗೆ ತಕ್ಕಂತೆಯೇ ಉಪೇಂದ್ರ ಅವರ ಪಕ್ಷವೂ ಇದ್ದ ಕಾರಣ, ಆ ಪಕ್ಷದ ಜವಾಬ್ದಾರಿಯನ್ನು ಉಪೇಂದ್ರ ಅವರಿಗೇ ಬಿಟ್ಟುಕೊಟ್ಟರು. 

ಈಗ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವನ್ನು ಮುನ್ನಡೆಸಲಿದ್ದಾರೆ. ಎಲ್ಲ 224 ಕ್ಷೇತ್ರಗಳಲ್ಲೂ ಉಪೇಂದ್ರ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದಾರಂತೆ. ಎಷ್ಟು ಕ್ಷೇತ್ರ ಗೆಲ್ಲಬಹುದು ಗೊತ್ತಿಲ್ಲ. ಆದರೆ, ಎಲ್ಲರ ಪರವಾಗಿ ಉಪೇಂದ್ರ ಪ್ರಚಾರವನ್ನಂತೂ ಮಾಡಲಿದ್ದಾರೆ. ಅವರೇ ಕೆಪಿಜೆಪಿಯ ಬ್ರಾಂಡ್ ಅಂಬಾಸಿಡರ್.

 

Rambo 2 Movie Gallery

Rightbanner02_kumari_21f_inside

Kumari 21 Movie Gallery